ಸರ್ಕಾರಿ ಆಸ್ಪತ್ರೆಗಳು ಕಾಗದ ರಹಿತವಾಗಿ ಕೆಲಸ ನಿರ್ವಹಿಸಬೇಕು

CTD 22 DHO-03
Published on

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳು ಕಾಗದ ರಹಿತವಾಗಿ ಕೆಲಸ ನಿರ್ವಹಿಸುವಂತಾಗ ಬೇಕು, ಈ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ,ಔಷಧ ವಿತರಣಾಧಿಕಾರಿ ಮತ್ತು ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ ಎಂ ದು ಡಿಎಚ್‌ಒ ಡಾ.ರಂಗನಾಥ್ ಹೇಳಿದರು.

ನಗರದ ಆರೋಗ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ಇ-ಆಸ್ಪತ್ರೆ ಕಾರ‌್ಯಕ್ರಮ ಅನುಷ್ಠಾದ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತ ನಾಡಿ,ಸರ್ಕಾರಿ ಆಸ್ಪತ್ರೆಗಳ ಪ್ರತಿಯೊಂದು ದಾಖಲೆಗಳನ್ನು ಕಾಗದ ರಹಿತವನ್ನಾಗಿ ಮಾಡಬೇಕಿದೆ. ಈಗಾಗಲೇ ಜಿಲ್ಲಾ ಆಸ್ಪತ್ರೆಯ ಲ್ಲಿ ಈ ಕೆಲಸ ಆರಂಭವಾಗಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಉಳಿದೆಲ್ಲ ಸಾರ್ವಜನಿಕ ಆಸ್ಪತ್ರೆಗಳನ್ನೂ ಕಾಗದ ರಹಿತವನ್ನಾಗಿ ಮಾಡುವ ಉದ್ದೇಶ ವಿದೆ ಎಂದರು.

ಇ-ಪ್ರೋಗ್ರಾಮರ್ ತಿಪ್ಪೇಸ್ವಾಮಿ ತರಬೇತಿ ನೀಡಿದರು. ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ರೇಣುಪ್ರಸಾದ್,ಜಿಲ್ಲಾ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್,ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್,ಡಾ.ಮಧುಕುಮಾರ್ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net