

ಕಿರುವಾರ ಎಸ್. ಸುದರ್ಶನ್ ಕೋಲಾರ
ಚಿನ್ನದನಾಡು ಕೋಲಾರ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರವು ಇನ್ನು ಸುಧಾರಣೆ ಕಾಣದ ಪರಿಣಾಮ ಸಾರ್ವಜನಿಕರ ಸಮರ್ಪಕ ಸೇವೆ ಪಡೆಯಲು ನಿತ್ಯವೂ ಪರದಾಡುವ ಅನಿವಾರ್ಯ ಸೃಷ್ಟಿಯಾಗಿದೆ. ಅಂತೆಯೇ, ಸರ್ಕಾರಿ ಆಸ್ಪತ್ರೆಗಳಲ್ಲಿನ ರಕ್ತ ಪರೀಾ ಪ್ರಯೋಗಾಲಯಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿವೆ!
ಹೌದು. ಬೆಳಗ್ಗೆ ಸರ್ಕಾರಿ ಆಸ್ಪತ್ರೆಗೆ ಬಂದು ರಕ್ತ ಪರೀಕ್ಷೆಗೆ ಮಾದರಿ ನೀಡಿದರೆ, ಅದರ ವರದಿ ಲಭ್ಯವಾಗುವುದು ಮಧ್ಯಾಹ್ನ 3 ಗಂಟೆ ಮೇಲೆಯೇ. ಈ ಅವ್ಯವಸ್ಥೆಗೆ ಸಿಬ್ಬಂದಿ, ಪ್ರಯೋಗಾಲಯ ನಿರ್ವಹಣೆ ಹೊಣೆ ಹೊತ್ತವರಿಗೆ ಸಮಯದ ಅರಿವಿಲ್ಲದಿರುವುದೇ ಕಾರಣ.
ಬೆಳಗ್ಗೆ 9 ಗಂಟೆಗೆ ಕಚೇರಿಗೆ ಬರಬೇಕಾದವರು 10.30ಕ್ಕೆ ಆಗಮಿಸುತ್ತಾರೆ. ತುರ್ತಾಗಿ ಪರೀಕ್ಷೆಯ ವರದಿ ಬೇಕಾದರೂ ಕೊಡುವುದಿಲ್ಲ, ಅವರು ಕೊಟ್ಟ ಸಮಯಕ್ಕೆ ತೆಗೆದುಕೊಳ್ಳಬೇಕು. ಒತ್ತಾಯಿಸಿದರೆ ಹೊರಗಡೆ ಮಾಡಿಸಿಕೊಳ್ಳಿ ಎಂದು ಧಮ್ಕಿ ಹಾಕುತ್ತಾರೆ ಎಂಬ ಆರೋಪ ಕೇಳಿ ಬಂದಿವೆ.
ವೈದ್ಯರು ರಕ್ತ ಪರೀಕ್ಷೆಗೆ ಶಿರಾಸು ಮಾಡಿದಾಗ ಒಪಿಡಿ ಚೀಟಿ ತೆಗೆದುಕೊಂಡು ಹೋಗಿ ಬಿಲ್ ಹಾಕಿಸಿಕೊಳ್ಳಬೇಕು, ರಕ್ತ ಮಾದರಿ ಕೊಡಲು ಸಹ ತಾಸುಗಟ್ಟೆ ಕಾಯಬೇಕು. ಕೊನೆಗೆ ವರದಿ ಸಿಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗೋದಂತೂ ಗ್ಯಾರಂಟಿ.
ವೈದ್ಯರು ಶಿಾರಸು ಮಾಡುವ ಅಷ್ಟೂ ರಕ್ತ ಪರೀಕ್ಷೆಗಳನ್ನು ಕೋಲಾರದ ಎಸ್ಎನ್ಆರ್ ಆಸ್ಪತ್ರೆ ಸೇರಿ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡುತ್ತಿಲ್ಲ. ಒಂದೆರಡು ಪರೀೆಗಳನ್ನು ಮಾಡಿ ಉಳಿದ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಮಾಡಿಕೊಳ್ಳುವಂತೆ ತಿಳಿಸುತ್ತಾರೆ. ಇದಕ್ಕೆ ಸರ್ಕಾರಿ ರಕ್ತ ಪರೀಕ್ಷೆ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಖಾಸಗಿ ರಕ್ತ ಪರೀಕ್ಷೆ ಪ್ರಯೋಗಾಲಯಗಳ ಮಾಲೀಕರೊಂದಿಗೆ ಶಾಮೀಲಾಗಿರುವ ಮಾತುಗಳು ಕೇಳಿ ಬಂದಿವೆ.ತಾಲೂಕು ಆಸ್ಪತ್ರೆಗಳಲ್ಲಿ ಕೆಲವೇ ಪರೀಕ್ಷೆಗಳಿಗೆ ಅವಕಾಶವಿದೆ. ಆದರೆ, ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ 130ಕ್ಕೂ ಹೆಚ್ಚು ರಕ್ತ ಪರೀಕ್ಷೆ ಮಾಡಲು ಅವಕಾಶ ಇದೆ. ಆದರೆ, ವೈದ್ಯರ ಶಿಫಾರಸ್ಸಿನಂತೆ ರಕ್ತ ಪರೀಕ್ಷೆ ಮಾಡುವುದಿಲ್ಲ. ಉದಾಹರಣೆಗೆ 8 ಮಾದರಿ ಪರೀಕ್ಷೆ ಬರೆದುಕೊಟ್ಟರೆ ಕೇವಲ 3 ರಿಂದ4 ಮಾದರಿ ಪರೀಕ್ಷೆ ಮಾಡಿಕೊಡುತ್ತಾರೆ. ಉಳಿದ ಪರೀಕ್ಷೆಗಳನ್ನು ಕೇಳಿದರೆ ಅವಕಾಶ ಇರೊದು ಇಷ್ಟಕ್ಕೆ ಅಂತ ಹೇಳುತ್ತಾರೆ. ಬೆಳಗ್ಗೆ ಪರೀಕ್ಷೆಗೆ ರಕ್ತ ಪಡೆದರೆ ವರದಿ ಸಿಗುವುದು ಮಧ್ಯಾಹ್ನ. ಪರಿಸ್ಥಿತಿ ಹೀಗಿದ್ದರೆ ಕಾಯಿಲೆಗೆ ಸಂಬಂಧಪಟ್ಟಂತೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಾದರೂ ಹೇಗೆ. ಈ ಬಗ್ಗೆ ವೈದ್ಯರಿಗೂ ಅಸಮಧಾನವಿದ್ದು, ಪರಿಸ್ಥಿತಿ ಸರಿಪಡಿಸಲು ಇಲಾಖಾಧಿಕಾರಿಗಳು ಮುಂದಾಗದೆ ಇರುವುದು ಈ ಅವ್ಯವಸ್ಥೆ ಮತ್ತಷ್ಟು ಹದಗೆಡಲು ಕಾರಣವಾಗಿದೆ.
ತುಕ್ಕು ಹಿಡಿಯುತ್ತಿವೆ ಯಂತ್ರಗಳುಜಿಲ್ಲೆಯಲ್ಲಿರುವ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೇಲಿದೆ. ಸಕಾಲಕ್ಕೆ ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸದ ಕಾರಣ ಪ್ರಯೋಗಾಲಯಗಳಲ್ಲಿ ಯಂತ್ರಗಳು ತುಕ್ಕು ಹಿಡಿಯುತ್ತಿವೆ.ಖಾಸಗಿ ಪ್ರಯೋಗಾಲಯದ ಜತೆ ಶಾಮೀಲುಎಸ್ಎನ್ಆರ್ ಆಸ್ಪತ್ರೆ ಸೇರಿ ಇತರ ಸಾರ್ವಜನಿಕರ ಆಸ್ಪತ್ರೆಗಳಲ್ಲಿನ ಪ್ರಯೋಗಾಲಯದ ನಿರ್ವಹಣಾಧಿಕಾರಿ, ಸಿಬ್ಬಂದಿ ಖಾಸಗಿ ಪ್ರಯೋಗಾಲಯಗಳ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ. ಈ ಪರಿಣಾಮಸರ್ಕಾರಿ ಪ್ರಯೋಗಾಲಯಗಳಲ್ಲಿ ಹೆಚ್ಚು ಪರೀಕ್ಷೆ ಮಾಡಲು ಅವಕಾಶ ಇದ್ದರೂ ಉದ್ದೇಶಪೂರ್ವಕವಾಗಿಯೇ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸುತ್ತಾರೆ. ಈ ಬಗ್ಗೆ ಕೇಳಿದರೆ ನಮ್ಮಲ್ಲಿ ಇರೊದು ಇಷ್ಟೇ ಅಂತ ಸಬೂಬು ಹೇಳುತ್ತಾರೆ. ಸರ್ಕಾರಿ ಆಸ್ಪತ್ರೆಗಳ ಸುತ್ತಲೂ ಖಾಸಗಿ ಪ್ರಯೋಗಾಲಯಗಳು ನಾಯಿಕೊಡೆಗಳಂತೆ ತಲೆಯೆತ್ತಿರುವುದು ದಂಧೆಗೆ ಪೂರಕ ಎನಿಸಿದ್ದು, ಆರೋಗ್ಯ ಇಲಾಖಾಧಿಕಾರಿಗಳು ಮೌನವಹಿಸಿರುವುದು ಹಲವು ಅನುಮಾನಕ್ಕೆ ಆಸ್ಪದ ಮಾಡಿದೆ.ಸಿಬ್ಬಂದಿಯಿಂದ ಅಕ್ರಮ ಎಸ್ಎನ್ಆರ್ ಆಸ್ಪತ್ರೆ ಜಿಲ್ಲಾಮಟ್ಟದ್ದಾದರೂ ಇಲ್ಲಿನ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆಗಳಿಗೆ ಅವಕಾಶ ಇರುವುದು 7 ರಿಂದ 8ಕ್ಕೆ ಮಾತ್ರ ಎಂದು ಸಿಬ್ಬಂದಿ ಹೇಳುತ್ತಾರೆ. ಆಸ್ಪತ್ರೆಗಳಲ್ಲಿ ಲಭ್ಯವಾಗದ ಪರೀಕ್ಷೆಗಳನ್ನು ಹೊರಗಡೆ ಮಾಡಿಸಿ ಬಿಲ್ ತಂದುಕೊಟ್ಟರೆ ಜಿಲ್ಲಾ ಸರ್ಜನ್ ಬಿಲ್ ಮಂಜೂರು ಮಾಡುತ್ತಾರೆ. ಆದರೆ, ಉಳ್ಳವರು ಮತ್ತು ಬಲಾಢ್ಯರಿಗೆ ಮಾತ್ರ ಆಗುತ್ತದೆ. ಉಳಿದ ಪರೀೆಗಳ ಹಣವನ್ನು ಆಸ್ಪತ್ರೆಯ ಸಿಬ್ಬಂದಿಯೇ ಡ್ರಾ ಮಾಡಿ ಹಂಚಿಕೆ ಮಾಡಿಕೊಳ್ಳುತ್ತಾರೆ. ಇ ಬಿಲ್ ಕೊಡುವುದರಲ್ಲೂ ಡಿಎಸ್ ತಾರತಮ್ಯ ಮಾಡುತ್ತಾರೆ. ಇಲ್ಲಿ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಎಂದು ನಾಗರಿಕರು ಆರೋಪಿಸಿದ್ದಾರೆ.
ರಕ್ತ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯಿಂದ ಹೊರಗಡೆಗೆ ಕಳುಹಿಸುವಂತಿಲ್ಲ. ಯಂತ್ರೋಪಕರಣ ಗಳನ್ನು ಪೂರೈಕೆ ಮಾಡಿದ್ದು, ರಿಪೇರಿಗೆ ಬಂದರೆ ಕೂಡಲೇ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಸೌಲಭ್ಯ ಲಭ್ಯವಿದ್ದು, ಹೊರಗಡೆಗೆ ಕಳುಹಿಸುವವರ ವಿರುದ್ಧ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು. - ಡಾ.ಶ್ರೀನಿವಾಸ್ ಡಿಎಚ್ಒ,ಕೋಲಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಸಂಬಳದ ಜತೆಗೆ, ಗಿಂಬಳನೂ ಬೇಕು. ಆರೋಗ್ಯ ಸೇವೆ ನೀಡಬೇಕು ಎಂಬ ಆಲೋಚನೆಯಿಲ್ಲ. ಇನ್ನು ಹಿರಿಯ ಅಧಿಕಾರಿಗಳಂತೂ ವಿಚಾರಗೊತ್ತಿದ್ದರು ಮೌನವಹಿಸುತ್ತಿದ್ದಾರೆ. - ಟಿ.ರಮೇಶ್ ತೊಟ್ಲಿ ನಿವಾಸಿ