

ಕೊಕ್ಕಡ: ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಿಂದ ಸರ್ಕಾರಿ ಆಸ್ಪತ್ರೆ ಬಾವಿಯ ಸ್ವಚ್ಛತೆ ಕಾರ್ಯ ಸೆ.21ರಂದು ನಡೆಯಿತು.
ಕೊಕ್ಕಡ ಪಿಡಿಒ ದೀಪಕ್ ಅವರ ಕರೆ ಮೇರೆಗೆ ಶೌರ್ಯ ವಿಪತ್ತು ತಂಡದವರು ಈ ಕಾರ್ಯ ಮಾಡಿದ್ದು, ಬಾವಿಯಲ್ಲಿ ವಿಪರೀತ ತ್ಯಾಜ್ಯ ವಸ್ತುಗಳು ತುಂಬಿ ನೀರು ಕಲುಷಿತಗೊಂಡು ಉಪಯೋಗಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿತ್ತು. ಒಂದು ಟನ್ಗಿಂತಲೂ ಅಧಿಕ ತ್ಯಾಜ್ಯ ಬಾವಿಯಲ್ಲಿ ಸಂಗ್ರಹವಾಗಿತ್ತು ಎಂದು ತಂಡದವರು ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ವಿಪತ್ತು ತಂಡದ ಕೃಷ್ಣಪ್ಪ ಗೌಡ, ರಮೇಶ್ ಬೈರಘಟ್ಟ, ಕಿರಣ್ ಸಂಕೇಶ, ಅವಿನಾಶ್ ಭಿಡೆ, ಮಾಧವ ಪೂಜಾರಿ, ರಶ್ಮಿತಾ ಭಾಗವಹಿಸಿದ್ದು, ಪಿಡಿಒ ದೀಪಕ್ ರಾಜ್, ವೈದ್ಯಾಧಿಕಾರಿ ಡಾ.ಪ್ರಕಾಶ್, ಡಾ.ತುಷಾರಾ ಉಪಸ್ಥಿತರಿದ್ದು ಕಾರ್ಯಾಚರಣೆಗೆ ಸಹಕರಿಸಿದರು.