ವೈದ್ಯ ಸೇವೆ ವ್ಯಾಪಾರೀಕರಣವಾಗಬಾರದು

mtb sudakar
ಹೊಸಕೋಟೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಖಾಸಗಿ ಆಸ್ಪತ್ರೆಯಲ್ಲಿನ ನ್ಯೂರೂ ಸೆಂಟರ್‌ನ್ನು ಸಂಸದ ಡಾ.ಸುಧಾಕರ್ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಉದ್ಘಾಟಿಸಿದರು. ಮಾಲೂರು ಮಾಜಿ ಶಾಸಕ ನಾಗರಾಜ್ ಇದ್ದರು.
Published on

ಬೆಂಗಳೂರು ಗ್ರಾಮಾಂತರ: ವೈದ್ಯಕೀಯ ಸೇವೆ ಮಾನವೀಯ ನೆಲಗಟ್ಟಿನಲ್ಲಿರಬೇಕು, ಆರೋಗ್ಯ ಸೇವೆ ವ್ಯಾಪಾರೀಕರಣವಾಗಬಾರದು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಹೊಸಕೋಟೆಯಲ್ಲಿ ಶುಕ್ರವಾರ ನೂತನವಾಗಿ ಪ್ರಾರಂಭವಾಗಿರುವ ಖಾಸಗಿ ಆಸ್ಪತ್ರೆಯಲ್ಲಿನ ನ್ಯೂರೂ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶೇ.40 ಸರ್ಕಾರಿ ಆಸ್ಪತ್ರೆಗಳಿದ್ದರೆ ಶೇ.60 ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆಯಲ್ಲಿ ನಿರತವಾಗಿವೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ಖಾಸಗಿ ಆಸ್ಪತ್ರೆಗಳು ಮುಂದಿವೆ ಎನ್ನಬಹುದು ಆದ್ದರಿಂದ ಖಾಸಗಿ ಆಸತ್ರೆಗಳು ವ್ಯಾಪಾರೀಕರಣವಾಗದೆ ಮಾನವೀಯತೆಯಿಂದ ಜನಸಾಮಾನ್ಯರಿಗೆ ಕೈಗೆಟುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದರು.
ಸುಸಜ್ಜಿತ ಆಸ್ಪತ್ರೆ ಬೇಕು: ಇಂದಿನ ಜೀವನ ಶೈಲಿಯಲ್ಲಿ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ, ಕೆಲವು ಕಾಯಿಲೆಗಳ ಹೆಸರೇನು ಎಂಬುದೇ ತಿಳಿಯದಂತ ಪರಿಸ್ಥಿತಿ ಇದೆ, ಈ ಹಿನ್ನೆಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಮನುಷ್ಯನ ಪ್ರಾಣ ಉಳಿಸಿ ಹೊಸ ಜೀವನ ಕೊಡುವ ಆರೋಗ್ಯ ಭಾಗ್ಯ ನೀಡುವ ಆಸ್ಪತ್ರೆಗಳ ಸೇವೆ ಅವಿಸ್ಮರಣೀಯವಾಗಿದೆ ಎಂದರು. ಹೊಸಕೋಟೆ ಭಾಗದಲ್ಲಿ ಜನಸಂಖ್ಯೆ ದಿನೆ ದಿನೇ ಅಂಕೆ ಮೀರಿ ಬೆಳೆಯುತ್ತಿದೆ, ಹಲವು ಖಾಸಗಿ ಕಂಪನಿಗಳು, ಅಪಾರ್ಟ್‌ಮೆಂಟ್, ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ತಲೆಎತ್ತುತ್ತಿವೆ ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತ ಆಸ್ಪತ್ರೆಗಳ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಹೊಸಕೋಟೆ ಟೋಲ್ ವ್ಯಾಪ್ತಿ ಇಂದಿನ ದಿನಗಳಲ್ಲಿ ಅಪಘಾತವಲಯವಾಗಿ ಗುರುತಿಸಿಕೊಂಡಿದೆ. ಅತಿಯಾದ ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಈ ನಿಟ್ಟಿನಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆ ಸಹಕಾರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net