ಆಸ್ಪತ್ರೆ ಗಾಜು ಒಡೆದು ಹಾನಿ

crime
Published on

ಮಂಗಳೂರು: ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯ ಗಾಜನ್ನು ಒಡೆದು ಹಾನಿಯನ್ನುಂಟು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.


ಉಳ್ಳಾಲ ಮುಕ್ಕಚ್ಚೇರಿಯ ನೌಫಾಲ್(25)ನನ್ನು ಅವರ ಸಂಬಂಧಿಕರು ಡಿ.4ರಂದು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೌಫಾಲ್ ಡಿ.5ರಂದು ಮೃತಪಟ್ಟಿದ್ದರು. ಈ ವಿಚಾರದಲ್ಲಿ ನೌಫಾಲ್ ಅವರ ಸಂಬಂಧಿಕರು ಆಸ್ಪತ್ರೆಯ ಸಿಬಂದಿ ಜತೆ ಮಾತನಾಡುತ್ತಿದ್ದಾಗ ಆ ಗುಂಪಿನಲ್ಲಿದ್ದ ಮುಕ್ಕಚ್ಚೇರಿ ನಿವಾಸಿ ಅಬ್ದುಲ್ ಜಬ್ಬರ್ ಆಸ್ಪತ್ರೆಯ ಸಿಬಂದಿಗೆ ಅವಾಚ್ಯವಾಗಿ ಬೈದು ಆಸ್ಪತ್ರೆಯ ರಿಸೆಪ್ಷನ್ ಕಚೇರಿಗೆ ಅಳವಡಿಸಿದ ಗಾಜಿಗೆ ಒಡೆದು ಸುಮಾರು 15,000 ರೂ. ನಷ್ಟ ಉಂಟು ಮಾಡಿದ್ದಾರೆ ಎಂಬುದಾಗಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net