ಅಮ್ಮತ್ತಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಘಟಕ ಆರಂಭ

27mdk05
Published on

ಮಡಿಕೇರಿ:
ವಿರಾಜಪೇಟೆ ತಾಲೂಕು ಅಮ್ಮತ್ತಿಯ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ ಸಿ ಟಿ ಸ್ಕ್ಯಾನಿಂಗ್ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು.

ನಾರ್ತ್ ಅಮೆರಿಕಾ ಕೊಡವ ಕೂಟ, ಕೂರ್ಗ್ ಫೌಂಡೇಶನ್ ಹಾಗೂ ಟಾಟಾ ಸಂಸ್ಥೆಯ ಸಹಯೋಗದಿಂದ ಈ ಘಟಕ ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಿಸಿದ ಈ ಘಟಕವನ್ನು ನಾರ್ತ್ ಅಮೆರಿಕಾ ಕೊಡವ ಕೂಟ ಅಧ್ಯಕ್ಷೆ ಕೊಂಗಂಡ ಜೀನಾ ಉದ್ಘಾಟಿಸಿದರು.

ಕೊಡವ ಕೂಟ ಕೋಶಾಧಿಕಾರಿ ಚೊಟ್ಟಂಗಡ ಅವಿನಾಶ್ ಪೆಮ್ಮಯ್ಯ ಹೊಸದಾಗಿ ವಿನ್ಯಾಸಗೊಂಡ ಆಸ್ಪತ್ರೆಯ ವೆಬ್‌ಸೈಟ್ ಅನಾವರಣಗೊಳಿಸಿದರು. ಈ ವೆಬ್‌ಸೈಟ್ ಮೂಲಕ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಈ ವೇಳೆ ಮಾತನಾಡಿದ ಆರ್‌ಐಎಚ್‌ಪಿ ಟ್ರಸ್ಟಿ ಡಾ. ಪಿ.ಜಿ. ಚೆಂಗಪ್ಪ, ಕೊಡವ ಕುಟದ ಕೊಡುಗೆಯನ್ನು ಶ್ಲಾಘಿಸಿದರು. ಆರ್‌ಐಎಚ್‌ಪಿ ಆಸ್ಪತ್ರೆ ಕೈಗೆಟಕುವ ದರದಲ್ಲಿ ಸೇವೆ ನೀಡುತ್ತಿದ್ದು, ಸಾರ್ವಜನಿಕರಿಗೆ ತಲುಪುವಂತಾಗಬೇಕು ಎಂದರು.

ಟಾಟಾ ಕಾಫಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ. ಬಿ. ಗಣಪತಿ, ಟಾಟಾ ಕಾಫಿ ಸಂಸ್ಥೆಯ ಹಣಕಾಸು ಅಧಿಕಾರಿ ವೆಂಕಟರಮಣನ್, ಆರ್‌ಐಎಚ್‌ಪಿ ಟ್ರಸ್ಟ್ ಅಧ್ಯಕ್ಷ ಚಾಕೂ ಪಿ ರಾಮನ್, ಆರ್‌ಐಎಚ್‌ಪಿ ಟ್ರಸ್ಟಿಗಳಾದ ಕೆ.ಪಿ.ಉತ್ತಪ್ಪ, ವಿನೋದ್ ಶಿವಪ್ಪ, ಮ್ಯಾಥಿವ್, ಎ.ಎಸ್. ಮುತ್ತಣ್ಣ, ಡಾ. ಎಂ.ಎಂ. ಚೆಂಗಪ್ಪ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net