ಮುಂಬೈಯಲ್ಲಿ ತಾಂಡಾ ಹೈದನಿಗೆ ಪಿಎಚ್.ಡಿ

phd
ತಾಯಿ ಈರಿಬಾಯಿ ಜತೆ ಪಿಎಚ್.ಡಿ ಪಡೆದ ಕುಮಾರ್ ರಾಠೋಡ್.
Published on

ತಾಯಿ ಈರಿಬಾಯಿ ಜತೆ ಪಿಎಚ್.ಡಿ ಪಡೆದ ಕುಮಾರ್ ರಾಠೋಡ್.

ಹೊಸಪೇಟೆ: ಜಿಲ್ಲೆಯ ಹೂವಿನಹಡಗಲಿ ತಾಲೂಕು ಲಿಂಗನಾಯಕನಹಳ್ಳಿ ತಾಂಡಾದ ಯುವಕ ಕುಮಾರ ರಾಠೋಡ್ ಅವರು ಮುಂಬೈನ ಕೇಂದ್ರೀಯ ಮೀನುಗಾರಿಕೆ ಶಿಕ್ಷಣ ಸಂಸ್ಥೆಯಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಸುಸ್ಥಿರ ಹ್ಯಾಲೋಫೈಟ್ ಆಧಾರಿತ ಸಮಗ್ರ ಮಲ್ಟಿ-ಟ್ರೋಫಿಕ್ ಉಪ್ಪುನೀರಿನ ಜಲಚರ ಸಾಕಣೆ ಮಾದರಿಗಳ ಮೌಲ್ಯಮಾಪನ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ದೊರೆತಿದೆ. ಮುಂಬೈನ ಕೇಂದ್ರೀಯ ಮೀನುಗಾರಿಕೆ ಶಿಕ್ಷಣ ಸಂಸ್ಥೆಯ ಕಾಕಿನಾಡ ಸಂಶೋಧನಾ ಕೇಂದ್ರದ ಅಧಿಕಾರಿ ಮತ್ತು ಹಿರಿಯ ವಿಜ್ಞಾನಿ ಡಾ.ಮುರಳಿಧರ ಪಿ.ಅಂಡೆ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net