ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ,

10 MANJU 06
Published on

ಹೊಸಪೇಟೆ: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಎಂ. ಕೃಷ್ಣ ಅವರು ರಾಜಕೀಯ ಮುತ್ಸದ್ಧಿಗಳು, ಜನಪ್ರಿಯ ರಾಜಕಾರಣಿಯೂ ಆಗಿ ಹೆಸರಾಗಿದ್ದರು. ಎಂತಹ ಸಮಯದಲ್ಲಿಯೂ ಸಹನೆ ಕಳೆದುಕೊಳ್ಳದೇ ಶಾಂತಚಿತ್ತದಿAದ ಸವಾಲುಗಳನ್ನು ನಿಭಾಯಿಸುತ್ತಿದ್ದರು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದಿವಂಗತ ಎಸ್.ಎಂ. ಕೃಷ್ಣ ಅವರ ಗೌರವಾರ್ಥ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಎಸ್.ಎಂ.ಕೃಷ್ಣ ಅವರು ದೇಶ ಯಶಸ್ವಿ ರಾಜಕಾರಣಿ. ಮುಖ್ಯಾಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪದ್ಮ ವಿಭೂಷಣ ಪ್ರಶಸ್ತಿ, ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡ ವಿವಿಯ ವಾಲ್ಮೀಕಿ ಅಧ್ಯಯನ ಪೀಠ ಉದ್ಘಾಟಿಸಿದರು. ಅವರ ಸಮಾಜಕ್ಕೆ ಅವರ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂತಾಪ ಸೂಚಕ ಸಭೆಯಲ್ಲಿ ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ಸಂಶೋಧಾನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net