ಶಿವಜ್ಯೋತಿ ನಗರಕ್ಕೆ ಫಾರಂ ನಂ.೩ ಕಲ್ಪಿಸಲು ಒತ್ತಾಯ

18 HPT 3
Published on

ಹೊಸಪೇಟೆ: ನಗರಸಭೆ ೮ನೇ ವ್ಯಾಪ್ತಿಯ ಶಿವಜ್ಯೋತಿ ಬಡಾವಣೆಯ ನಿವೇಶನಗಳಿಗೆ ಫಾರಂ ನಂ.೩ ಹಾಗೂ ಮತ್ತಿತರೆ ದಾಖಲೆಗಳನ್ನು ಒದಗಿಸಬೇಕು ಎಂದು ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಜಯನಗರ ನಾಗರೀಕ ವೇದಿಕೆ ಒತ್ತಾಯಿಸಿದೆ.

ಈ ಕುರಿತು ವಿವಿಧ ಸಂಘಗಳ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಅವರಿಗೆ ಮನವಿ ಸಲ್ಲಿಸಿ, ನಗರಾಭಿವೃದ್ಧಿ ಪಾಧಿಕಾರದ ಅನು ಮೋದನೆಯೊಂದಿಗೆ ೨೦೦೫ರಲ್ಲಿ ಶಿವಜ್ಯೋತಿ ಬಡಾವಣೆ ನಿರ್ಮಾಣವಾಗಿದೆ. ಸುಮಾರು ೮೦ ಎಕರೆ ಪ್ರದೇಶದಲ್ಲಿ ೧೩೩೬ ನಿವೇಶನಗಳನ್ನು ನಿರ್ಮಿಸಿದ್ದು, ನೂರಾರು ನಿವೇಶನದಾರರು ವಿವಿಧ ಇಲಾಖೆಗಳಿಗೆ ಶುಲ್ಕ ಪಾವತಿಸಿ ಕಾನೂನು ಬದ್ಧವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಾರ್ಚ್ ೨೦೨೧ರ ವರೆಗೆ ಫಾರಂ-೩ ಹಾಗೂ ಖಾತಾ ಬದಲಾವಣೆ ದಾಖಲೆ ಪಡೆದಿದ್ದಾರೆ.

ಆದರೆ, ೨೦೨೧ರ ನಂತರ ಶಿವಜ್ಯೋತಿ ಬಡಾವಣೆಯ ನಿವೇಶನದಾರರಿಗೆ ಫಾರಂ-೩, ಖಾತಾ ಬದಲಾವಣೆ ಮುಂತಾದ ದಾಖಲೆಗಳನ್ನು ನೀಡುತ್ತಿಲ್ಲ. ಸಕಾರಣವಿಲ್ಲದೇ ಬಡವಾಣೆ ನಿವಾಸಿಗಳಿಗೆ ದಾಖಲೆಗಳನ್ನು ನೀಡದಿರುವುದು ಕಾನೂನು ಬಾಹಿರ. ಬ್ಯಾಂಕ್ ಸಾಲ, ಮಾರಾಟ ಮತ್ತಿತರೆ ಉದ್ದೇಶಗಳಿಗೆ ನಿವೇಶನ, ಮನೆಗೆ ಸಂಬAಧಿಸಿದ ದಾಖಲೆಗಳು ದೊರೆಯದಿದ್ದರಿಂದ ಜನರು ಪರದಾಡುವಂತಾ ಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಯು.ಆಂಜನೇಯಲು, ಪದಾಧಿಕಾರಿಗಳಾದ ಎಸ್.ಮಹಮ್ಮದ್ ಬಾಷಾ, ವೈ.ಯಮುನೇಶ, ಡಿ.ಅಂಜನೇಯ, ಶಿವಶಂಕರಪ್ಪ, ಕೆ.ಎನ್. ರಮೇಶ್, ಹೆಚ್.ತಿಪ್ಪೇಸ್ವಾಮಿ, ಟಿ.ಸಾಬಣ್ಣ, ರೇವಣ್ಣ, ಸಿದ್ದಯ್ಯ, ಶಕ್ಷಾವಲ್ಲಿ, ನಜೀರ್‌ಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net