ನಗರಸಭೆ ಸಿಬ್ಬಂದಿ ಅಮಾನತಿಗೆ ಕೋರ್ಟ್ ತಡೆ

WhatsApp Image 2023-09-05 at 9.16.14 AM
Published on

ಹೊಸಪೇಟೆ: ನಗರಸಭೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ಧಾರವಾಡ ಪೀಠ ಸೋಮವಾರ ತಡೆಯಾಜ್ಞೆ ನೀಡಿದೆ.

ಅಮಾನತು ಶಿಕ್ಷೆಗೆ ಒಳಗಾಗಿರುವ ಕರ ವಸೂಲಿಗಾರರಾದ ಎನ್.ಯಲ್ಲಪ್ಪ, ಎಚ್. ಶಂಕರ್ ಹಾಗೂ ದಾಖಲೆಗಳ ವಿಭಾಗದ ಡಿ.ಎಚ್.ಸುರೇಶ ಅವರು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಅಮಾನತು ಆದೇಶದಲ್ಲಿ ಉಲ್ಲೇಖಿಸಿರುವಂತೆ ಅರ್ಜಿದಾರರು ನೇರವಾಗಿ ಕರ್ತವ್ಯಲೋಪ ಎಸಗಿಲ್ಲ. ದಾಖಲೆ ನಾಪತ್ತೆ ಕುರಿತಾದ ಅರ್ಜಿಯಲ್ಲಿ ಅವರು ಸಹಿ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ತಡೆಹಿಡಿದು, ಯಥಾ ಸ್ಥಿತಿಯಲ್ಲಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಆದೇಶಿಸಿದ್ದಾರೆ.

ಅಲ್ಲದೇ, ಈ ಕುರಿತು ಯಾವುದೇ ರೀತಿಯ ತಕರಾರುಗಳಿದ್ದಲ್ಲಿ ಸರ್ಕಾರದ ಹೆಚ್ಚುವರಿ ವಕೀಲರು ಸೆ.೧೩ರ ಒಳಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಹೇಳಿಕೆಯನ್ನು ದಾಖಲಿಸಲು ಕೋರ್ಟ್ ಅವಕಾಶ ನೀಡಿದೆ. ಅಲ್ಲಿ ವರೆಗೆ ಜಿಲ್ಲಾಧಿಕಾರಿ ಹೊರಡಿಸಿರುವ ಅಮಾನತು ಆದೇಶಕ್ಕೆ ತಡೆ ನೀಡಿದೆ ಎಂದು ಅರ್ಜಿ ದಾರರ ಪರ ವಕೀಲ ಸಬಿಲ್ ಅಹ್ಮದ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net