

ಹೊಸಪೇಟೆ: ಹೊಸಪೇಟೆ ನಗರಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳಿದ್ದು, ಅಧ್ಯಕ್ಷರಾಗಿ ಎ.ಲತಾ ಅವರು ೨೨ ಮತಗಳಿಂದ ಮತ್ತು ಉಪಾಧ್ಯಕ್ಷರಾಗಿ ರೂಪೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಾಯಕ ಆಯುಕ್ತ ಸಿದ್ರಾಮೇಶ್ವರ ಅವರ ನೇತೃತ್ವದಲ್ಲಿ ನಡೆದ ಚುನಾವಣ ಪ್ರಕ್ರಿಯೆಯಲ್ಲಿ ಪರಿಶೀಷ್ಟ ಜಾತಿ(ಮಹಿಳೆ)ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ೩೦ನೇ ವಾರ್ಡ್ನ ಪಕ್ಷೇತರ ಸದಸ್ಯೆ ಎ.ಲತಾ, ಕಾಂಗ್ರೆಸ್‌ನಿAದ ೭ನೇ ವಾರ್ಡ್ನ ಕನಕಮ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ, ಉಪಾಧ್ಯಕ್ಷ(ಸಾಮಾನ್ಯ) ಸ್ಥಾನಕ್ಕೆ ಆಯ್ಕೆ ಬಯಸಿ ೫ನೇ ವಾರ್ಡ್ನ ಬಿಜೆಪಿ ಸದಸ್ಯ ರೂಪೇಶ್ ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದರು. ನಾಮಪತ್ರ ಪರಿಶೀಲಿಸಿದ್ದು, ಮೂರೂ ಕ್ರಮ ಬದ್ಧವಾಗಿದ್ದವು. ಈ ಪೈಕಿ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ರೂಪೇಶ್ ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಕೈಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ೩೫ ಜನ ಸದಸ್ಯ ಬಲ ಪೈಕಿ ಮತದಾನದ ವೇಳೆ ೨೯ ಜನ ಸದಸ್ಯರು ಹಾಜರಿದ್ದು, ಹಕ್ಕು ಚಲಾಯಿಸಿದರು. ಬಿಜೆಪಿಯ ಎ. ಲತಾ ಪರ ೨೨ ಹಾಗೂ ಕಾಂಗ್ರೆಸ್‌ನ ಕನಕಮ್ಮ ಅವರಿಗೆ ೭ ಜನ ಸದಸ್ಯರ ಬೆಂಬಲವ್ಯಕ್ತವಾಯಿತು ಎಂದು ಚುನಾವಣಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮಾಹಿತಿ ನೀಡಿದರು.
ಅಭಿನಂದನೆಯ ಮಹಾಪೂರ:
ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ನಗರಸಭೆ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಬೆಂಬಲಿಗರಿAದ ಅಭಿನಂದನೆಯ ಮಹಾಪೂರವೇ ಹರಿದು ಬಂತು. ಶಾಲು, ಹಾರ, ಪೇಟತೊಡಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಸದಸ್ಯರಾದ ಜೀವರತ್ನಂ, ರಮೇಶ ಗುಪ್ತಾ, ಕಿರಣ್ ಕುಮಾರ್ ಸೇರಿದಂತ ಮತ್ತಿತರರು ಹಾಜರಿದ್ದರು.