ಹೊಸಪೇಟೆ: ರಸ್ತೆ ಅಪಘಾತದಲ್ಲಿ ಕರಡಿ ಬಲಿ

Published on

ಹೊಸಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಕರಡಿಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇವಲಾಪುರ ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.‌

ಸುಮಾರು ಮೂರು ವರ್ಷದ ಹೆಣ್ಣು ಕರಡಿ ಅಪಘಾತದಲ್ಲಿ ಮೃತಪಟ್ಟಿದೆ. ನೀರು, ಆಹಾರ ಅರಸಿ ಕಾಡಿನಿಂದ ಗ್ರಾಮದತ್ತ ಸಾಗಿತ್ತಿದ್ದ ಕರಡಿ, ರಸ್ತೆ ದಾಡುವ ವೇಳೆ ಅತೀವೇಗದಿಂದ ಬಂದಿದ್ದ  ವಾಹನ‌‌ ಡಿಕ್ಕಿ ಹೊಡೆದಿದೆ‌. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾಂಭವ ಕೊಂಚ ದೂರ ಸಾಗುತ್ತಲೇ ಕುಸಿದು ಬಿದ್ದು, ಕೊನೆಯುಸಿರೆಳೆದಿದೆ.

ಕಳೆದ ಒಂದು ವರ್ಷದಲ್ಲಿ ಮೂರು‌ ಕರಡಿಗಳು ಅಪಘಾತದಲ್ಲಿ ಬಲಿಯಾಗಿವೆ.

ಕಳೆದ‌ ವರ್ಷದಲ್ಲಿ ಕಾರಿಗನೂರು ಬಳಿಶಂಕರನಾಗ್  ಕ್ಯಾಂಪ್ ಬಳಿ ರೈಲಿಗೆ ಒಂದು ಬಲಿಯಾಗಿದ್ದರೆ, ಮತ್ತೊಂದು ಮರಿಯಮ್ಮನಹಳ್ಳಿ ಬಳಿ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಕೊನೆಯುಸಿರೆಳೆದಿತ್ತು ಎಂದು ಹೊಸಪೇಟೆ ವಲಯ‌ ಅರಣ್ಯಾಧಿಕಾರಿ ವಿನಯ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net