ಶುದ್ದ ನೀರಿನ ಪೂರೈಕೆ ಹೆಚ್ಚಿನ ಆದ್ಯತೆ ನೀಡಿ

06 MANJU 01
Published on

ಹೊಸಪೇಟೆ: ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ಗ್ರಾಮಗಳಿಗೆ ಸಮರ್ಪಕವಾಗಿ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುರುವಾರ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬAಧಿಸಿದAತೆ ಕಾಮಗಾರಿಗಳ ಯೋಜನೆ, ಅನುಷ್ಟಾನ, ಮೇಲ್ವೀಚಾರಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಾಲೆಗೆ ಬರುವ ಮಕ್ಕಳಿಗೆ ಕಡ್ಡಾಯವಾಗಿ ಶೂಗಳನ್ನು ವಿತರಣೆ ಮಾಡಬೇಕು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳ ಮೂಲಕ ಹಳ್ಳಿಗಳ ಬಯಲು ಮಲವಿಸರ್ಜನೆ ಮುಕ್ತ ಸ್ಥಿತಿಯ ಸುಸ್ಥಿರತೆಯನ್ನು ಖಚಿತಪಡಿಸಬೇಕು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ನೈರ್ಮಲ್ಯ ಕಾಪಡುವುದು ಮತ್ತು ಬಯಲು ಮುಕ್ತ ಮಲವಿಸರ್ಜನೆ ಹಳ್ಳಿಗಳನ್ನಾಗಿ ಮಾಡಬೇಕು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು, ಸ್ವಚ್ಛ ಸಂಕೀರ್ಣ ಘಟಕಗಳಾದ ವಿಭಜನಾ ಶೆಡ್‌ಗಳು ಮತ್ತು ಕಾಂಪೋಸ್ಟ್ ಹೊಂಡಗಳು, ತ್ಯಾಜ್ಯ ಸಂಗ್ರಹ ವಾಹನಗಳು, ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು, ಮಲ ಕೆಸರು ನಿರ್ವಹಣೆ ಮತ್ತು ಗೋಬರ್ಧನ್ ಘಟಕಗಳಂತಹ ಎಲ್ಲಾ ನೈರ್ಮಲ್ಯ ಸ್ವತ್ತುಗಳ ಕಾರ್ಯಕ್ಷಮತೆಯಿಂದ ಕೂಡಿರಬೇಕು. ಜೆಜೆಎಂಗಳು ಮತ್ತು ಎಸ್‌ಬಿಎಂ ಯೋಜನೆಗಳ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ನಡುವೆ ಒಮ್ಮತ ಮತ್ತು ಪರಿಣಾಮಕಾರಿ ಸಮನ್ವಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ನೀರಿಗೆ ಸಂಬAಧಿಸಿದ ಯಾವುದೇ ತೊಂದರೆಯನ್ನು ಸಕಾಲದಲ್ಲಿ ಪರಿಹರಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಡಿಎಚ್‌ಒ ಡಾ.ಶಂಕರ್ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಚ್.ವಿ.ಮಂಜುನಾಥ, ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ದೀಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net