ಯುವಕರಲ್ಲಿ ಹೋರಾಟದ ಪ್ರವೃತ್ತಿ ಬೆಳೆಯಲಿ

23 MANJU 01
Published on

ಹೊಸಪೇಟೆ: ದೇಶಕ್ಕೆ ಸ್ವಾತಂತ್ರ‍್ಯವನ್ನು ತಂದುಕೊಡುವಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದ ನಾಯಕ ತಮ್ಮ ಸುಭಾಷ್ ಚಂದ್ರ ಬೋಸ್ ವಿಭಿನ್ನಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೂವಿನ ಹಡಗಲಿ ತಾಪಂ ಇಒ ಉಮೇಶ ಹೇಳಿದರು.

ಪತಂಜಲಿ ಯೋಗ ಸಮಿತಿಯಿಂದ ನಗರದ ನ್ಯೂ ಬಲ್ಡೋಟಾ ಪಾರ್ಕ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಿಂದ ಬ್ರಿಟಿಷರನ್ನು ಹೊಡೆದೋಡಿಸಬೇಕೆಂದು ನೇತಾಜಿ ಸುಭಾಸ್ಚಂದ್ರ ಭೋಸ್ ಅವರು ಅಧಿಕಾರಿ ಹುದ್ದೆಯನ್ನು ತ್ಯಜಿಸಿ ಹೋರಾಟಕ್ಕೆ ಧುಮುಕಿದ್ದರು. ಶಾಂತಿ ಅಹಿಂಸೆಯಿAದ ಸ್ವಾತಂತ್ರ‍್ಯ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಸ್ವತಂತ್ರ ಸೇನೆಯನ್ನು ಹುಟ್ಟುಹಾಕಿ ನೇರವಾಗಿ ಯುದ್ಧವನ್ನು ಸಾರಿದವರು. ಜೈಹಿಂದ ಘೋಷಣೆ ಮೂಲಕ ಜನರಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸಿದ ನೇತಾಜಿ ಅವರ ಧೈರ್ಯ, ಸಾಹಸ ಪ್ರವೃತ್ತಿಯಿಂದಾಗಿ ಬ್ರಿಟಿಷರಿಗೆ ಸಿಂಹಸ್ವಪ್ನದAತಿದ್ದರು. ಅಂಥ ಒಬ್ಬ ಅಪ್ರತಿಮ ನಾಯಕರನ್ನು ಈಗ ಕಾಣಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನತೆ ನೇತಾಜಿಯವರ ಜೀವನ, ಸಾಹಸ, ಸಾಧನೆ, ಹೋರಾಟ ಪ್ರವೃತ್ತಿಯನ್ನು ತಿಳಿದುಕೊಳ್ಳಬೇಕು ಎಂದರು.

ಸಮಿತಿಯ ಜಿಲ್ಲಾ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿ, ತ್ಯಾಗ, ಬಲಿದಾನ, ಹೋರಾಟದ ಮೂಲಕ ನಮ್ಮ ಹಿರಿಯರು, ಮಹನೀಯರು ನಮಗೆ ಸ್ವಾತಂತ್ರ‍್ಯ ತಂದು ಕೊಟ್ಟಿದ್ದಾರೆ. ಅಂಥವರ ಆದರ್ಶ ವ್ಯಕ್ತಿತ್ವವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಹೂವಿನ ಹಡಗಲಿ ತಾಪಂ ಇಒ ಉಮೇಶ, ಜಿಲ್ಲಾ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ, ಸಮಿತಿಯ ಪ್ರಮುಖರಾದ ಶ.ಇ.ಸತ್ಯಪ್ಪ, ವಿಠೋಬಾ ಬಲ್ಲೂರು, ಶ್ರೀನಿವಾಸ, ಶಿವಮೂರ್ತಿ, ಕಿರಣಕುಮಾರ, ವೀರೇಶ ಕನಕೇರಿಮಠ, ಮಂಗಳಕ್ಕ, ದಾಕ್ಷಾಯಣಿ, ಅನಂತ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net