ಮದುವೆಗೆ ನಿರಾಕರಣೆ ಯುವತಿಗೆ ಚಾಕು ಇರಿದ ಭಗ್ನಪ್ರೇಮಿ

Hospet murder case
Published on

ಹೊಸಪೇಟೆ: ಮದುವೆಯಾಗಲು ನಿರಾಕರಿಸಿದ ಯುವತಿಗೆ ಭಗ್ನಪ್ರೇಮಿ, ನಂದ್ಯಾಲ ನಿವಾಸಿ ವಿಜಯ್ ಭಾಸ್ಕರ್ (27) ಮಂಗಳವಾರ ನಗರದ ಬಾಲಕಿಯರ ಪ್ರೌಢಶಾಲೆ ಬಳಿ ಚಾಕುವಿನಿಂದ ಇರಿದಿದ್ದು, ಈಗ ಪೊಲೀಸರ ವಶದಲ್ಲಿದ್ದಾನೆ. ಭಾರತಿ ಹಲ್ಲೆಗೊಳದ ಯುವತಿ.

ಫೇಸ್‌ಬುಕ್‌ನಲ್ಲಿ ಐದು ವರ್ಷಗಳ ಹಿಂದೆ ಪರಸ್ಪರ ಪರಿಚಯವಾಗಿತ್ತು. ನಂತರ ಯುವತಿಯನ್ನು ಮದುವೆಯಾಗುವಂತೆ ಭಗ್ನಪ್ರೇಮಿ ಪೀಡಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಲ್ಲ. ಯುವತಿಗೆ ದೂರದ ಸಂಬಂಧಿಯೂ ಆಗಿದ್ದ ಭಗ್ನಪ್ರೇಮಿ ತನ್ನ ತಂದೆ-ತಾಯಿಯನ್ನು ಯುವತಿ ಮನೆಗೆ ಮದುವೆ ಮಾತುಕತೆಗೆಂದು ಕಳುಹಿಸಿದ್ದಾನೆ. ಮಾತುಕತೆ ವೇಳೆ ಯುವತಿ ಹಾಗೂ ಆಕೆ ಮನೆಯವರು ಒಪ್ಪಿಲ್ಲ. ಆಗಿನಿಂದಲೂ ಯುವತಿ ಬೆನ್ನು ಬಿದ್ದಿದ್ದ ವಿಜಯ್ ಭಾಸ್ಕರ್, ತನ್ನ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಯುವತಿ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ ತೆರಳುತ್ತಿದ್ದ ವೇಳೆ ಸ್ಕೂಟಿಯೊಂದರಲ್ಲಿ ಬಂದು, ತನ್ನನ್ನು ಮದುವೆಯಾಗಲು ಪೀಡಿಸಿದ್ದಾನೆ. ಒಪ್ಪದ್ದರಿಂದ ನೀನು ಯಾರಿಗೂ ಸಿಗಬಾರದು ಎಂದು ಚಾಕುವಿನಿಂದ ಆಕೆಯ ಬಲಪಕ್ಕೆಗೆ ಚುಚ್ಚಿದ್ದಾನೆ. ಮತ್ತೊಮ್ಮೆ ತಿವಿಯಲು ಬಂದಾಗ ಬಲಗೈ ಅಡ್ಡ ಹಿಡಿದಿದ್ದು, ಅಲ್ಲೂ ಗಾಯವಾಗಿದೆ. ಗಾಯಗೊಂಡ ಭಾರತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net