

ಹೊಸಪೇಟೆ: ಶ್ರೀ ಕ್ಷೇತ್ರ ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಯೋಗಿನಾರೇಯಣ ಯತೀಂದ್ರ ಅವರು ಪದ್ಯ ಕೀರ್ತನೆ, ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ ಯೋಗಿ ಎಂದು ಹುಡಾ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಬಲಿಜ ಸಂಘದಿAದ ನಗರದ ಬಲಿಜ ಭವನದಲ್ಲಿ ಭಾನುವಾರ ಶ್ರೀ ಯೋಗಿನಾರೇಯಣ 190 ನೇ ಆರಾಧನೆ ಮಹೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಪಗಳ ಪ್ರಾಬಲ್ಯ, ಪ್ರಳಯ, ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳ ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು ಶ್ರೀ ಯೋಗಿನಾರೇಯಣ ಯತೀಂದ್ರ ಅವರು ತಮ್ಮ ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಜಾತಿ ಮತಗಳ ಕೂಲ ಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ ದಲಿತರ ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ಯೋಗಿನಾರಾಯಣರ ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಬಲಿಜ ಸಂಘದ ಅಧ್ಯಕ್ಷ ಜಿ.ಪಾಂಡುರಂಗ, ಪ್ರಧಾನ ಕಾರ್ಯದರ್ಶಿ ಜಿ.ರಾಜೇಂದ್ರ ಇತರರಿದ್ದರು.