

ಹೊಸಪೇಟೆ: ನಿರಂತರ ಯೋಗ ಮಾಡುವುದರಿಂದ ನಿರೋಗಿಯಾಗುವುದು ಮಾತ್ರವಲ್ಲದೇ ಆರ್ಥಿಕ ಹೊರೆಯು ಕಡಿಮೆಯಾಗಿಲಿದೆ ಎಂದು ಯೋಗಶಿಕ್ಷಕ ಭವರ್‌ಲಾಲ್ ಆರ್ಯ ತಿಳಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಸಂಜೆ ಪತಂಜಲಿ ಯೋಗ ಸಮಿತಿಯ ಫ್ರೀಡಂ ಪಾರ್ಕ್ ಯೋಗ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದÀರು.
ನಾವು ಜೀವನ ಪೂರ್ತಿ ದುಡಿದ ಹಣ ಆರೋಗ್ಯವೃದ್ಧಿಗೆ ವಿನಿಯೋಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಪ್ಪಿಸಲು ಯೋಗ ಒಂದೆ ದಾರಿ. ರಾಜ್ಯದಲ್ಲಿಯೇ ಫ್ರೀಡಂ ಪಾರ್ಕ್ ಮಾದರಿ ಯೋಗ ಕೇಂದ್ರವಾಗಿ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗಕ್ರಿಯೆಯೆಲ್ಲಿ ತೊಡಗುವುದರಿಂದ ಆಸ್ಪತ್ರೆ ಖರ್ಚುಕಡಿಮೆ ಮಾಡಿದಂತಾಗಿದೆ ಎಂದರು.
ಪತAಜಲಿ ಯೋಗ ಸಮಿತಿಯ ಡಾ.ಎಸ್.ಬಿ.ಹಂದ್ರಾಳ್ ಮಾತನಾಡಿ, ಯಾವುದೆ ಒಂದು ಚಟುವಟಿಕೆಯಲ್ಲಿ ಶ್ರದ್ದೆಯಿಂದ ಪಾಲ್ಗೊಂಡರೆ ಯಾವ ಸಾಧನೆ ಬೇಕಾದರು ಮಾಡಬಹುದು ಎನ್ನುವುದಕ್ಕೆ ಫ್ರೀಡಂ ಪಾರ್ಕ್ ಸಾಕ್ಷಿಯಾಗಿದೆ ಎಂದರು
ಯೋಗ ಸ್ನೇಹ ಕೇಂದ್ರದಿAದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದಿದ್ದ ಪ್ರೇಕ್ಷಕರನ್ನು ರಂಜಿಸಿತು. ಹಾಸ್ಯ, ನೃತ್ಯ, ಗೀತಗಾಯನ, ನಾಟಕ, ಮಿಮಿಕ್ರಿ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಯುವ ಪ್ರಭಾರಿ ಕಿರಣ್‌ಕುಮಾರ, ರಾಜ್ಯ ಸಮಿತಿ ಸದಸ್ಯ ಡಾ.ಎಫ್.ಟಿ.ಹಳ್ಳಿಕೇರಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಮುಖ್ಯಸ್ಥ ಅನಂತ ಜೋಶಿ, ಪ್ರಮುಖರಾದ ದೇವೇಂದ್ರ, ವೀರೇಶ್, ವಿಠೋಬ ಬಲ್ಲೂರ, ಸತ್ಯಪ್ಪ ಇತರರಿದ್ದರು.