ಯತ್ನಾಳ್ ಬಹಿರಂಗ ಕ್ಷಮೆಯಾಚಿಸಲಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

161122 Hospete Banajiga Sangha Protest
ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಬಹಿರಂಗ ಕ್ಷಮೆ ಕೇಳಲು ಒತ್ತಾಯಿಸಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಹಸೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
Published on

ಹೊಸಪೇಟೆ: ವಿನಾಕಾರಣ ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಒತ್ತಾಯಿಸಿತು.

ಈ ಕುರಿತು ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಿ, ಇತ್ತೀಚೆಗೆ ರಾಜ್ಯದ ವಿವಿಧೆಡೆ ಆಯೋಜಿಸಿದ್ದ ಸಮಾವೇಶಗಳಲ್ಲಿ ವಿನಾಕಾರಣ ಬಣಜಿಗ ಸಮಾಜದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಬಣಜಿಗರ ವ್ಯಾಪಾರವನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿದರು.

ಬಣಜಿಗರು ವ್ಯಾಪಾರಿಗಳು, ಮೃದು ಸ್ವಭಾವಿಗಳು. ಎಲ್ಲ ಜನ ಸಮುದಾಯಗಳೊಂದಿಗೆ ಕೂಡಿ ಬಾಳುವವರು. ಅಲ್ಲದೇ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ವಿರೋಧಿಸಿಲ್ಲ. ಆದರೂ, ಬಣಜಿಗ ಸಮಾಜದ ಜನರ ಘನತೆಗೆ ಧಕ್ಕೆಯಾಗುವಂಥ ಹೇಳಿಕೆ ನೀಡಿರುವುದು ಸರಿಯಲ್ಲ. ಈ ಕೂಡಲೇ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಗರಸಭೆ ಸದಸ್ಯ ಕೆ. ಮಂಜುನಾಥ್, ಪ್ರಮುಖರಾದ ಕೋರಿಶೆಟ್ಟೆ ಲಿಂಗಪ್ಪ, ಜಿ.ವಿರೂಪಾಕ್ಷಪ್ಪ ಹಾಗೂ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net