ವುಶು ಲೀಗ್ ಪಂದ್ಯಾವಳಿ ನಾಳೆಯಿಂದ

13 MANJU 03
Published on
ಹೊಸಪೇಟೆ: ನಗರದಲ್ಲಿ ಫೆ.15 ಮತ್ತು 16 ರಂದು ಖೇಲೋ ಇಂಡಿಯಾ ಮಹಿಳೆಯರ ರಾಜ್ಯ ಮಟ್ಟದ ವುಶು ಲೀಗ್ ಪಂದ್ಯಾವಳಿ ನಡೆಯಲಿದೆ ಎಂದು ವುಶು ಸಂಸ್ಥೆಯ ಜಂಟಿ ಕಾರ್ಯದರ್ಶಿ ಅಶೋಕ್ ಡಿ‌.ಮೋಕಾಶಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸಬ್ ಜೂನಿಯರ, ಜೂನಿಯರ ಹಾಗೂ ಸೀನಿಯರ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 300 ಮಹಿಳಾ ಕ್ರೀಡಾಪಟುಗಳು ಬಾಗಿಯಾಗಲಿದ್ದಾರೆ. ಉಚಿತವಾಗಿ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಪದಕ ಪಡೆದ ಕ್ರೀಡಾಪಟುಗಳನ್ನು ರೋನಲ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ಆಯ್ಕೆ ಮಾಡಲಾಗುತ್ತದೆ ಎಂದರು.
ಪ್ರಮುಖರಾದ ರವಿ, ಮಲ್ಲಿಕಾರ್ಜುನ, ಕೆ.ಗೋಪಾಲ್, ತಿಪ್ಪೇಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net