ಶಾಂತಿ ಅನುಭವಿಸಿ, ಆಸ್ವಾದಿಸಿದರೆ ಬದುಕು ಸಾರ್ಥಕ

21 MANJU 02
Published on

ಹೊಸಪೇಟೆ: ಅತಿಯಾದ ದುರಾಸೆಯಿಂದ ಮನುಷ್ಯನ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಮೂಲಭೂತ ಅವಶ್ಯಕತೆಗಳಲ್ಲಿ ಶಾಂತಿಯು ಒಂದಾಗಿದ್ದು, ಮಾತಿನಲ್ಲಿ ಹೇಳಲು ಬರುವುದಿಲ್ಲ ಸ್ವಾನುಭವ ಪಡಬೇಕು ಎಂದು ಕೊಟ್ಟೂರು ಸ್ವಾಮಿ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.

ವಿಶ್ವ ಶಾಂತಿ ದಿನಾಚರಣೆ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ, ಯುವ ರೆಡ್ ಕ್ರಾಸ್ ಸಹಯೋಗದೊಂದಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವಾಕಥಾನ್‌ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಅಂತರAಗದಲ್ಲಿ ಶಾಂತಿ ಇಲ್ಲದಿದ್ದರೆ ಬದುಕನ್ನು ಅನುಭವಿಸಲು ಸಾಧ್ಯವಿಲ್ಲ. ತಪ್ಪು ಮಾಡುವ ವ್ಯಕ್ತಿಗೆ ಜ್ಞಾನದ ಕೊರತೆ ಇರುತ್ತದೆ. ಜ್ಞಾನ ಇದ್ದವರಿಗೆ ಅಮೃತತ್ವ ಸಿಗುವುದು, ಶಾಂತಿ ಎಂಬುದು ಭಾಷಣದಲ್ಲಿ ಹೇಳುವ ಪದವಲ್ಲ ಅದನ್ನು ಅನುಭವಿಸಿ ಆಸ್ವಾದಿಸಿದರೆ ಬದುಕು ಸಾರ್ಥಕ ಎಂದರು.

ಜಿಲ್ಲಾ ಕ್ರೀಡಾಂಗಣದಿAದ ಆರಂಭವಾದ ವಾಕಥಾನ್ ಅಂಬೇಡ್ಕರ್ ವೃತ್ತ, ಡಾ.ಪುನೀತ್ ರಾಜಕೂಮಾರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಗಾಂಧಿ ಚೌಕ್, ದೊಡ್ಡ ಮಸೀದಿ ಮೂಲಕ ನಗರಸಭೆ ಮಾರ್ಗವಾಗಿ ಪುನಃ ಪುನೀತ್ ರಾಜಕುಮಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.

ಹುಡಾ ಅಧ್ಯಕ್ಷ ಎಚ್.ಏನ್.ಎಫ್.ಇಮಾಮ್ ನಿಯಾಜಿ, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ, ರೆಡ್ ಕ್ರಾಸ್ ರಾಜ್ಯಕಾರ್ಯಕಾರಿಣಿ ಸದಸ್ಯರಾದ ಡಾ.ಶ್ರೀನಿವಾಸ ಹ್ಯಾಟಿ, ರೇಖಾ ಪ್ರಕಾಶ್, ಜಿಲ್ಲಾ ಉಪ ಸಭಾಪತಿ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net