

ಹೊಸಪೇಟೆ: ಮೊದಲಿ ನಿಂದಲೂ ಹೆಣ್ಣುಮಕ್ಕಳು ಎಲ್ಲಾ ಆಯ್ಕೆ, ಸ್ವಾತಂತ್ರ‍್ಯ ಮತ್ತು ಆಯ್ಕೆಗಳಿಂದ ಹಿಂದುಳಿದವರು. ಹೆಣ್ಣುಮಕ್ಕಳು ಸಹ ಈ ಜಗತ್ತಿನ ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ಬಹು ಮುಖ್ಯವಾದ ಪಾತ್ರವನ್ನ ವಹಿಸಿದ್ದಾರೆ ಎಂದು ಹೋರಾಟಗಾರ್ತಿ ದು.ಸರಸ್ವತಿ ಹೇಳಿದರು.
ಸಖಿ ಸಂಸ್ಥೆಯಿAದ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ದುಡಿಯುವ ಮಹಿಳೆಯರ ಸಮಾವೇಶದಲ್ಲಿ ಮಾತನಾಡಿದರು. ಹೆಣ್ಣು ಮಕ್ಕಳು ತಮ್ಮ ಸ್ವಾತಂತ್ರ‍್ಯದ ಹಕ್ಕುಗಳನ್ನು ಗಟ್ಟಿಯಾಗಿ ಕೇಳಿ ತೆಗೆದುಕೊಳ್ಳಬೇಕು ಎಂದರು.
ಉಪನ್ಯಾಸಕಿ ಸೌಭಾಗ್ಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸಪೇಟೆ ತಾಲೂಕು ಪಂಚಾಯಿತಿಯ ಎಡಿ ಶಮಿಮ್ ಭಾನು, ಹಂಪಿ ಗ್ರಾಮ ಪಂಚಾಯಿತಿ ಪಿಡಿಒ ಗಂಗಾಧರ್, ಶೃತಿ ಶ್ರೀಹರಿಬಾಬು, ಸಖಿ ಟ್ರಸ್ಟ್ನ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮಿ ಇತರರಿದ್ದರು.