ಜಾತ್ಯತೀತ ದೇಶದಲ್ಲಿ ಎಲ್ಲರೂ ಸಮಾನ

03 MANJU 07
Published on

ಹೊಸಪೇಟೆ: ಸಾಹಿತಿ ಭಾನು ಮುಸ್ತಾಕ್ ದಸರಾ ಉದ್ಘಾಟನೆ ಮಾಡೋದಕ್ಕೆ ನನ್ನ ಬೆಂಬಲವಿದೆ ಎಂದು ಶಾಸಕ ಗವಿಯಪ್ಪ ಹೇಳಿದರು.

ನಗರದಲ್ಲಿ 16.50 ಕೋಟಿ ವೆಚ್ಚದ ಜಿಲ್ಲಾ ಆಸ್ಪತ್ರೆಗೆ ಹೋಗುವ ದಾರಿ ಸೇರಿದಂತೆ ನಾನಾ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮದು ಜಾತ್ಯತೀತ ದೇಶ, ಎಲ್ಲಾ ನಾಗರಿಕರು ಸಮಾನರು. ಇಲ್ಲಿ ಜಾತಿ, ಬೇಧ, ತಾರತಮ್ಯ ಬರೋಲ್ಲ. ಕಾಂಗ್ರೆಸ್ ಪಕ್ಷವು ಸೆಕ್ಯೂಲರ್‌ವಾದ ಹೊಂದಿರೋ ಪಕ್ಷವಾಗಿದೆ. ದಸರಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡಿರೋ ನಿಲುವು ಸರಿ ಇದೆ. ಭಾನು ಮುಸ್ತಾಕ್ ಅವರ ಸಾಧನೆ ಅಪರವಾಗಿದೆ. ಎಲ್ಲಾ ಕವಿಗಳು ಒಂದೇ. ಬಿಜೆಪಿಯವರಿಗೆ ಕೆಲಸವಿಲ್ಲದ ಕಾರಣ ವಿವಾದ ಮಾಡುತ್ತಾರೆ ಎಂದರು.

ಭಾನು ಮುಸ್ತಾಕ್ ಅವರು ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ಬಹಳ ಹಗುರವಾಗಿ ಮಾತಾಡಿದ್ದಾರೆ ಎಂದು ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೇ ಭಾನು ಮುಸ್ತಾಕ್ ಮಾತಾಡಿದ್ದು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net