ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ

14 MANJU 06
Published on

ಹೊಸಪೇಟೆ: ಸಂಡೂರಿನಲ್ಲಿ ನಡೆದ ಸಿಎಂ ಕಾರ್ಯಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತುಂಗಭದ್ರಾ ಜಲಾಶಯದ ವೈಕುಂಠ ವಸತಿಗೃಹದಲ್ಲಿ ಸೋಮವಾರ ವಿಶ್ರಾಂತಿ ಪಡೆದುರು. ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬೇಟಿ ನೀಡಿ ಇಲಾಖೆಯ ಪ್ರಗತಿ ಬಗ್ಗೆ ಚರ್ಚಿಸಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುವ ಎಲ್ಲ ಕಾಮಗಾರಿಗಳಿಗೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ಕಳಪೆಯಾದರೆ ಎಂಜಿನಿಯರ್ ಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು. ಗುತ್ತಿಗೆದಾರರಿಂದ ಸರಿಯಾದ ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರರು ಹಣ ಉಳಿಸಿಕೊಳ್ಳಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ, ಕಟ್ಟಡಗಳನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕಾಮಗಾರಿಯ ಸ್ಥಳಗಳಿಗೆ ಖುದ್ದು ಬೇಟಿ ನೀಡಬೇಕು. ರಸ್ತೆಗಳು ಅತಿಕ್ರಮಣವಾಗದಂತೆ, ರಸ್ತೆ ಮಧ್ಯದಲ್ಲಿ ಚರಂಡಿ ನೀರು ಅಥವಾ ಮಳೆ ನೀರು ನಿಲ್ಲದಂತೆ ಸಂರಕ್ಷಿಸಬೇಕು. ಕ್ರೀಡಾಂಗಣ, ಗ್ರಂಥಾಲಯದAತಹ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.

ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಡಿವೈಎಸ್ಪಿ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net