ಸಾಲಸೌಲಭ್ಯಕ್ಕೆ ಬ್ಯಾಂಕ್‌ಗಳ ಸಹಕಾರ ಅಗತ್ಯ

17 MANJU 05
Published on

ಹೊಸಪೇಟೆ: ಸರ್ಕಾರದ ಯೋಜನೆಗಳ ಸಾಲ ಪಡೆಯಲು ಬ್ಯಾಂಕ್ ಗಳಲ್ಲಿ ಕೆಲ ವಿಚಾರದಲ್ಲಿ ಸಡಲಿಕೆ ನೀಡಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ಉಪನಿರ್ದೇಶಕರ ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೈಕ್ರೋ ಫೈನಾನ್ಸ್ ನಿಂದ ಸಾಕಷ್ಟು ಕುಟುಂಬಗಳು ಪರದಾಡುವಂತಾಗಿದೆ. ಮಹಿಳಯರ ಅಭಿವೃದ್ಧಿಗೆ ಬ್ಯಾಂಕ್ ಸಹಕಾರ ಬೇಕಿದೆ. ಕೆಲ ನಿಯಮಗಳನ್ನು ಸಡಿಲಗೊಳಿಸಿ ಸಾಲ ಸೌಲಭ್ಯ ನೀಡಿಬೇಕು. ಬ್ಯಾಂಕ್ ಇಲ್ಲದೇ ಸರ್ಕಾರದ ಯೋಜನೆಗಳು ನಡೆಯಲ್ಲ. ಮಹಿಳೆಯರಿಗೆ ಸಾಲ ಸೌಲಭ್ಯದ ಅವಶ್ಯಕತೆಯಿದೆ. ಬ್ಯಾಂಕ್ ಸಮಸ್ಯೆಯಿಂದ ಸರ್ಕಾರದಿಂದ ಅನುದಾನ ಮಹಳಿ ಹೋಗುತ್ತಿವೆ ಎಂದರು.

ರಾಜ್ಯದಲ್ಲಿ ಮಾಜಿ ದೇವದಾಸಿಯರ, ಅಲ್ಪಸಂಖ್ಯಾತ ಲಿಂಗತ್ವ ಮರು ಸಮೀಕ್ಷೆ ಮಾಡುತ್ತಿದೆ. ಸರಿಯಾದ ಅಂಕಿ ಅಂಶ ಸಿಗಬೇಕಿದೆ. 45ದಿನಗಳ ಕಾಲ ಸಮೀಕ್ಷೆಗೆ ಅವಕಾಶವಿದೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡಲು ಸಂಘ-ಸAಸ್ಥೆಗಳ ಸಹಕಾರ ಅಗತ್ಯ. ಬರಿ 40 ಜನ ಅಲ್ಪಸಂಖ್ಯಾತ ಲಿಂಗತ್ವ ಗೃಹ ಲಕ್ಷ್ಮೀ ಯೋಜನೆ ಸಿಗುತ್ತಿದೆ. ಆದರೆ, ಪಡಿತ ಚೀಟಿಯಿಲ್ಲದೇ ಸಮಸ್ಯೆಯಾಗಿದೆ. ಆದ್ದರಿಂ ಟಿಜಿ ಕಾರ್ಡ್ನಿಂದ ಪಡಿತರ ಚೀಟಿ ಕೊಡುವಂತೆ ಸರ್ಕಾರಕ್ಕೆ ಚರ್ಚೆ ಮಾಡುವೆ. ಅಧಿಕಾರಿಗಳಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಸದುಪಯೋಗ ಪಡೆದುಕೊಳ್ಳಿ. ನಿವೃತ್ತಿ ನಂತರ ಸೇವೆ ಮಾಡುತ್ತೇವೆ ಎಂದರು ಸಿಗಲ್ಲ ಎಂದರು.

ಲಿಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ ಕುಮಾರ್ ಮಾತನಾಡಿ, ಗ್ರಹಕರಿಗೆ ಅಲೆದಾಡಿಸುವ ಕಾರ್ಯ ನಡೆಸಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಅರ್ಜಿಗಳ ಒಂದು ತಿಂಗಳ ಒಳಗೆ ಇತ್ಯರ್ಥ ಮಾಡಲಾಗುತ್ತದೆ. ಕಾರಣವಿಲ್ಲದೇ ಅರ್ಜಿ ತಿರಸ್ಕರಿಸುವಂತ್ತಿಲ್ಲ. ಸಮಸ್ಯೆಗಳಿದ್ದರೆ ದೂರು ನೀಡಿ ಕ್ರಮಕೈಗೊಳ್ಳುತ್ತೇವೆ ಎಂದರು.

ವ್ಯಾವಸ್ಥಾಪಕ ನಿರ್ದೇಶಕಿ ಅಕ್ಕಮ್ಮದೇವಿ, ಡಿಡಿ ಶ್ವೇತಾ, ಜಿಲ್ಲಾ ನಿರುಪಣಾಧಿಕಾರಿ ಎಚ್.ಮುದುಗಪ್ಪ ಇತರರಿದ್ದರು.

ಶಾಸಕರಿಗೆ ಒಂದು ನಮಸ್ಕರ

ಲಿಂಗತ್ವ ಅಲ್ಪಸಂಖ್ಯಾತರು ನಿವೇಶನ ಸೇರಿ ಇತರೆ ಯೋಜನೆಗಳು ಶಾಸಕರಿಂದ ಪಡೆಯೇಕು ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು. ಲಿಂಗತ್ವ ಅಲ್ಪಸಂಖ್ಯಾತೆ ಲಕ್ಷ್ಮೀ ಮಾತನಾಡಿ, ಅಯ್ಯೋ ತಾಯಿ ಅದನ್ಯಾಕೆ ಹೇಳ್ತಿಯ, ಅಲ್ಲಿ ಹೋಗುವ ಬಿಕ್ಷೆ ಬೇಡುವುದೇ ವಾಸಿ. ಶಾಸಕರ ಮನೆ, ಕಚೇರಿಗೆ ಹೋದರೆ ಅಲ್ಲಿನ ರಸ್ತೆ ಸವಿಯುತ್ತೇ ಹೊರತು ಕೆಲಸ ಆಗಲ್ಲ ಎಂದು ಅಸಮಧಾನ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net