ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ

31 MANJU 06
Published on

ಹೊಸಪೇಟೆ: ಭಾವನೆಗಳನ್ನು ಮುಕ್ತವಾಗಿ ಮತ್ತು ಆರೋಗ್ಯಕರವಾಗಿ ವ್ಯಕ್ತಪಡಿಸುವುದು ಮಾನಸಿಕ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಶಿವಮೊಗ್ಗದ ಮನೋವೈದ್ಯೆ ಡಾ.ಕೆ.ಎಸ್.ಪವಿತ್ರಾ ತಿಳಿಸಿದರು.

ಕನ್ನಡ ವಿವಿಯ ವಿಜ್ಞಾನಗಳ ಇತಿಹಾಸ ವಿಭಾಗ ಮತ್ತು ಮಹಿಳಾ ಅಧ್ಯಯನ ವಿಭಾಗದ ಸಹಯೋಗದಲ್ಲಿ ಭುವನ ವಿಜಯ ಸಭಾಂಗಣದಲ್ಲಿ ಕಾವ್ಯ ಮತ್ತು ನೃತ್ಯದ ಮೂಲಕ ಮಹಿಳಾ ಮಾನಸಿಕ ಆರೋಗ್ಯ ವಿಶೇಷ ಉಪನ್ಯಾಸ ನೀಡಿದರು.

ನೋವು, ದುಃಖ, ಕೋಪ, ಹತಾಶೆ ಅಥವಾ ಆತಂಕದAತಹ ನಕಾರಾತ್ಮಕ ಭಾವನೆಗಳನ್ನು ನಮ್ಮೊಳಗೆಯೇ ಹುದುಗಿಸಿಟ್ಟುಕೊಂಡಾಗ ಅವುಗಳು ಕಾಲಾನಂತರದಲ್ಲಿ ದೊಡ್ಡ ಪ್ರಮಾಣ ಬೀರುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಇದು ಆತ್ಮಹತ್ಯೆಯಂತಹ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆಂದು ಇನ್ನು ನಿಮ್ಮ ಸುತ್ತಮುತ್ತ ಯಾರಾದರೂ ಹೀಗೆ ಭಾವನೆಗಳನ್ನು ಅಡಗಿಸಿಟ್ಟುಕೊಳ್ಳುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಅವರೊಂದಿಗೆ ಮಾತನಾಡಿ, ಬೆಂಬಲ ನೀಡಿ ಮತ್ತು ಅಗತ್ಯವಿದ್ದರೆ ಸಹಾಯ ಪಡೆಯಲು ಪ್ರೋತ್ಸಾಹಿಸಿವೆಂದು ತಿಳಿಸಿದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೃಜನಾತ್ಮಕತೆಯನ್ನು ಉತ್ತೇಜಿಸುವಲ್ಲಿ ಕಲಾ ಚಟುವಟಿಕೆಗಳು ಪರಿಣಾಮಕಾರಿಯಾಗಿದ್ದು, ಒತ್ತಡದ ಯುಗದಲ್ಲಿ ಮಾನಸಿಕ ಆರೋಗ್ಯ ತುಂಬಾ ಮಹತ್ವದಾಗಿದೆ. ನಮ್ಮ ಆಂತರ್ಯದಲ್ಲಿ ಮಾನಸಿಕ ಅನಾರೋಗ್ಯ ದುಗುಡತೆ ನಮ್ಮನ್ನು ಪ್ರತಿನಿತ್ಯವೂ ಕಾಡುತ್ತಿದೆ. ಇಂತಹ ಸಮಸ್ಯೆಗಳಿಗೆ ಕಲೆ, ಸಾಹಿತ್ಯ, ಸಂಗೀತ ಹಾಗೂ ನೃತ್ಯಗಳಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕಾರಿಯಾಗಿದೆ ಎಂದರು.

ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಶೈಲಜ ಇಂ.ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net