ಮಹಿಳೆಯರಿಗೆ ಪಾವಾಸ್ ಹಣ ಕೊಡಿಸಿ

20 MANJU 02
Published on

ಹೊಸಪೇಟೆ: ಸಬ್ಸಿಡಿ ಸಾಲ ಕೊಡಿಸುದಾಗಿ ವಂಚಿಸಿದ ಪ್ರಿಯಾಂಕಾ ಪತ್ತಿನ ಸಹಕಾರ ಸಂಘದಿAದ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಸಿಪಿಐಎಂ, ದಲಿತ ಹಕ್ಕುಗಳ ಸಮಿತಿಯಿಂದ ಭಾನುವಾರ ಶಾಸಕ ಎಚ್.ಆರ್.ಗವಿಯಪ್ಪಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಾಲ ಕೊಡಿಸುತ್ತೇವೆ ಎಂದು 300ಕ್ಕೂ ಹೆಚ್ಚು ಮಹಿಳೆಯರಿಗೆ, ಎಸ್ಸಿ ಎಸ್ಟಿ ಸಮೂದಾಯದ ಬಡ ರೈತರಿಗೆ ಮತ್ತು ಕುಟುಂಬಗಳಿಗೆ ನಂಬಿಸಿ ಶೇ.50ರಷ್ಟು ಮುಂಗಡ ಹಣ ವಸೂಲಿ ಮಾಡಿದ್ದರೆ. ಸಾಲ ಮಂಜೂರಾದ ನಂತರ ಸಬ್ಸಿಡಿ ಹಣ ಹೊರತು ಪಡಿಸಿ, ಇನ್ನುಳಿದ ಹಣ ಸಾಲ ಪಡೆದವರು ವಾಪಸ್ಸು ಕಟ್ಟುವಂತಿಲ್ಲ ಎಂದು ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಆಗ್ರಹಿಸಿದರು.

ಅರ್ಜಿ ಹಾಕುವ ಮುನ್ನ ಮುಂಗಡ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ ತಿಂಗಳುಗಳೆ ಕಳೆದರು ಸಾಲ ಮಾತ್ರ ಬರಲಿಲ್ಲ. ಇದನ್ನು ಪ್ರಶ್ನೆ ಮಾಡಿದ ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಕಟ್ಟಿದ್ದ ಮುಂಗಡ ಹಣ ವಾಪಸ್ಸು ಕೊಡಬೇಕು ಒತ್ತಾಯಿಸಿದಾಗ, ಪ್ರಿಯಾಂಕ ಜೈನ್ ಅವರು ಎರಡು ತಿಂಗಳ ಕಾಲಾವಕಾಶ ಕೇಳಿ ಕಳೆದ ಫೆಬ್ರವರಿಯಲ್ಲಿ ಬಾಂಡ್ ಬರೆಸಿಕೊಂಡಿದ್ದಾರೆ. ಆದರೆ, ಇಲ್ಲಿಯ ವರೆಗೆ ಹಣವನ್ನು ಹಿಂದಿರುಗಿಸದೆ ವಂಚನೆ ಮಾಡಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರಾದ ಕವಿತಾ ಸಿಂಗ್ ಅವರು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಅವರ ವಿರುದ್ಧ ತನಿಖೆಯಾಗಿ ಅಮಾಯಕ ಮಹಿಳೆಯರಿಗೆ ನ್ಯಾಯಾ ಸಿಗಬೇಕಿದೆ. ಇಲ್ಲವೇಂದರೆ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.

ಪ್ರಮುಖರಾದ ಯು.ಬಸವರಾಜ್, ಯಲ್ಲಲಿಂಗ, ಮರಡಿ ಜಂಬಯ್ಯನಾಯಕ, ಭಾಸ್ಕರ್ ರೆಡ್ಡಿ, ಈಡಿಗರ ಮಂಜುನಾಥ, ನಾಗರತ್ನಮ್ಮ, ಪವನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net