

ಹೊಸಪೇಟೆ: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಮಹಿಳೆಯರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಹೆಣ್ಣುಮಕ್ಕಳು ಸುರಕ್ಷಿತವಾಗಿ ಈ ನೆಲದಲ್ಲಿ ಬದುಕಲು ಅವಕಾಶ ಆಗಬೇಕು, ಕುಟುಂಬಗಳಿAದ, ಶಿಕ್ಷಣ ಸಂಸ್ಥೆಗಳಿAದ ಮತ್ತು ಎಲ್ಲಾ ಕ್ಷೇತ್ರಗಳು ಲಿಂಗಸೂಕ್ಷ್ಮತೆಯ ಕಡೆಗೆ ಹೋದರೆ ಮಾತ್ರ ಈ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ. ಹೆಣ್ಣುಮಕ್ಕಳು ಮಾಡುವ ಕೆಲಸದ ಸ್ಥಳಗಳು ಸುರಕ್ಷಿತವಾಗಿರುವಂತೆ ವ್ಯವಸ್ಥೆಯಿಂದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮನ್ವಯ ಸಮಿತಿಯ ಎಸ್.ಆರ್.ಹಿರೇಮಠ್, ಡಾ.ಸಬಿಯ ಭೂಮಿ ಗೌಡ, ವಾಣಿ ಪೆರಿಯೋಡಿ, ಸುಮನ, ಗೌರಿ ಇತರರಿದ್ದರು.