

ಹೊಸಪೇಟೆ: ಮಹಿಳಾ ಸಬಲೀಕರಣದಿಂದ ಮಾತ್ರ ಅಭಿವೃದ್ಧಿ, ಸಮಾಜ ಏಳಿಗೆ ಸಾಧ್ಯವಾಗಲಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಿAದ ಮಹಾನವಮಿ ದಿಬ್ಬ ಹಂಪಿಯ ವರೆಗೆ ಶನಿವಾರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಕುಟುಂಬದಲ್ಲಿ ಹಲವು ಪಾತ್ರಗಳನ್ನು ನಿಭಾಹಿಸುವ ಮಹಿಳೆಯರಿಗೆ ತಾರತಮ್ಯ ಮಾಡಬಾರದು. ಎಲ್ಲಾ ರಂಗದಲ್ಲಿ ಮಹಿಳೆಯರು ದಿಟ್ಟತನದಿಂದ ತೋಡಗಿಸಿಕೊಂಡಿರುವುದು ಕಾಣಬಹುದು. ಮಹಿಳೆಯರು ಸಬಲರಾದರೆ ಸಮಾಜ ಪ್ರಗತಿಯೂ ಆಗಲಿದೆ ಎಂದರು.
ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ, ಇಲಾಖೆಯ ಡಿಡಿ ಶ್ವೇತಾ, ಸಿಡಿಪಿಒ ಸಿಂಧು ಅಂಗಡಿ, ಬ್ರಹ್ಮಕುಮಾರಿ ಈಶ್ವರ ವಿಶ್ವವಿದ್ಯಾಲಯದ ಅಕ್ಕ ಮಾನಸ, ಪ್ರಮುಖರಾದ ರಜನಿ, ಸುಭದ್ರ ದೇವಿ, ಅನ್ನಪೂರ್ಣ, ನೀತಾ ಪಾಟೀಲ್ ಇತರರಿದ್ದರು.