ಹಂಪಿ ಪರಿಸರದಲ್ಲಿ ಗಾಳಿ ಮಳೆ

10 MANJU 12
filter: 0; fileterIntensity: -0.01; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:1; bokeh:1; module: night;hw-remosaic: false;touch: (-1.0, -1.0);sceneMode: 524288;cct_value: 0;AI_Scene: (9, 0);aec_lux: 370.0904;aec_lux_index: 0;albedo: ;confidence: ;motionLevel: -1;weatherinfo: null;temperature: 34;zeissColor: bright;
Published on

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸೇರಿದಂತೆ ತಾಲೂಕಿನ ಕಮಲಾಪುರ ಹಾಗೂ ಸುತ್ರಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಯಿತು.

ಕೆಲ ದಿನಗಳಿಂದ ಬಿಸಿಲಿನ ಝಳ ಹೆಚ್ಚಿರುವುದರ ಜತೆ ಮಳೆಯ ವಾತಾವರಣ ಕಂಡು ಕಂಡು ಬಂತು. ಗುರುವಾರ ಸಂಜೆ 6 ಗಂಟೆಯಿAದ ಮೋಡ ಕವಿದ ವಾತವರಣದಲ್ಲಿ ಗಾಳಿ ಸಹಿತ ಗುಡುಗಿನ ಆರ್ಭಟ ಮುಂದುವರೆಯಿತು. ಸಂಜೆ 7ರ ನಂತರ ಗುಡುಗು ಸಿಡಲಿನ ಜತೆ ಕೆಲ ಕಾಲ ಸಾಧಾರಣ ಮಳೆಯಾಗಿದೆ.

ಮಳೆ ನಿಂತರೂ ತುಂತುರು ಹನಿ ಬೀಳುತ್ತಲೇ ಇತ್ತು. ಬೈಕ್, ಇನ್ನಿತರ ವಾಹನ ಸವಾರರು ಮಳೆಯಲ್ಲೇ ಸಾಗಿದರು. ಕೆಲವರು ಕೊಡೆ ಆಶ್ರಯಿಸಿದರು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ಸಂಜೆಯಿAದಲ್ಲೇ ಮೋಡ ಕವಿದ ವಾತಾವರಣ ಕಂಡಿದ್ದರಿAದ ಹೆಚ್ಚಿನ ಜನ ಹೊರಗಡೆ ಕಾಣಲಿಲ್ಲ. ಗುರುವಾರ ಕನಿಷ್ಠ23, ಗರಿಷ್ಠ 38 ಡಿಗ್ರಿ ತಾಪಮಾನ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net