

ಹೊಸಪೇಟೆ: ನಗರದ ಇಬ್ಬರು ವ್ಯಕ್ತಿಗಳು ನೀರುಪಾಲಾಗಿ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿದ್ದು, ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ನಗರದ ಚಪ್ಪರದಹಳ್ಳಿ ನಿವಾಸಿ ಆಟೋ ಚಾಲಕ ಸಣ್ಣ ನಿಂಗಪ್ಪ(53) ಎಂಬುವರು ತನ್ನ ಮೃತಪಟ್ಟ ತಾಯಿಯ ವಿಧಿವಿಧಾನ ಕಾರ್ಯ ಕುಟುಂಬದೊAದಿಗೆ ನಡೆಸಿ ಟಿಬಿಡ್ಯಾಂ ಎಲ್ ಎಲ್ ಸಿ ಕಾಲುವೆಯಲ್ಲಿ ಕಾಲು ತೊಳೆಯಲು ಹೋಗಿ ನೀರುಪಾಲಾಗಿದ್ದಾರೆ. ಶನಿವಾರ ಕಮಲಾಪುರದ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಸುಣ್ಣದಬಟ್ಟಿ ಪ್ರದೇಶದ ಕೃಷ್ಣ ಎಂಬುವರು ಟಿಬಿಡ್ಯಾಂ ಎಲ್‌ಎಲ್‌ಸಿ ಕಾಲುವೆಯಲ್ಲಿ ಶವವಾಗಿ ಸಿಕ್ಕಿದ್ದು, ಕಮಲಾಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಕೃಷ್ಣ ಅವರು ಕುಡಿದ ಅಮಲಿನಲ್ಲಿ ಊಟ ಹೊರಗೆ ಹೋದವರು ತಿರುಗಿ ಮನೆಗೆ ಬಾರದ ಹಿನ್ನೆಲ್ಲೆ ಎಲ್ಲ ಕಡೆ ವಿಚಾರಿಸಿದ್ದಾರೆ. ಎರಡು ದಿನದ ನಂತರ ಕಾಲುವೆಯಲ್ಲಿ ಹುಡುಕುತ್ತ ಹೋದಾಗ ಕಮಲಾಪುರ ಬಳಿ ಪತ್ತೆಯಾಗಿದೆ. ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಪ್ರಕರಣ ದಾಖಲಾಗಿದೆ.