ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ

water
ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಕುಡಿವ ನೀರಿಗೆ ಒತ್ತಾಯಿಸಿ ಮಹಿಳೆಯರು ಕೊಡಗಳನ್ನು ಪ್ರದರ್ಶಿಸಿದರು.
Published on

ಹೊಸಪೇಟೆ: ಸಮರ್ಪಕವಾಗಿ ಕುಡಿವ ನೀರು ಪುರೈಕೆ ಮಾಡಿ ಎಂದು ಆಗ್ರಹಿಸಿ ತಾಲೂಕಿನ ಧರ್ಮಸಾಗರದಲ್ಲಿ ಗುರುವಾರ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಧರ್ಮಸಾಗರದಲ್ಲಿ ಜನರು ನೀರಿಗಾಗಿ ದಿನವೂ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ 500 ಮನೆಗಳಿದ್ದು, 1300 ಜನಸಂಖ್ಯೆ ಇದೆ. ಇರುವ ಮೂರು ಬೋರ್‌ವೆಲ್‌ಗಳಲ್ಲಿ ಎರಡು ಬೋರ್‌ವೆಲ್‌ಗಳು ಕೈಕೊಟ್ಟಿವೆ. ಒಂದೇ ಬೋರ್‌ವೆಲ್‌ನಲ್ಲಿ ಇಡೀ ಊರಿಗೆ ನೀರು ಒದಗಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಹಾಗಾಗಿ ಕುಡಿವ ನೀರಿನ ಸಮಸ್ಯೆ ಪರಿಹರಿಸಿ ದಿನ ನಿತ್ಯವೂ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಧರ್ಮಸಾಗರದಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಯೋಜನೆ ಕೂಡ ಹಳ್ಳ ಹಿಡಿದಿದೆ. ಗ್ರಾಮಕ್ಕೆ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಬೇಕು. ಧರ್ಮಸಾಗರ ಗ್ರಾಮದಲ್ಲಿ ಬಹು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಕೂಡ ಹಳ್ಳ ಹಿಡಿದಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಜನರು ಕೆಲಸ, ಕಾರ್ಯಗಳಿಗೆ ಅನುವು ಮಾಡಿಕೊಡಬೇಕು.

ಜನರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಬೇಕು ಎಂದು ಗ್ರಾಮದಲ್ಲಿ ರಸ್ತೆಗೆ ಬಿಂದಿಗೆ ಇಟ್ಟು ಮಹಿಳೆಯರು ಪ್ರತಿಭಟನೆ ಕೂಡ ನಡೆಸಿದರು. ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ ಪಿಡಿಓ ಕೂಡ ಸಮಸ್ಯೆಗೆ ಪರಿಹರಿಸುತ್ತಿಲ್ಲ ಎಂದೂ ಶಾಸಕ ಎಚ್.ಆರ್. ಗವಿಯಪ್ಪನಗೆ ಊರಿದ್ದಾರೆ. ನೀವದರೂ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಕಿರಮ್ಮ, ಹುಲಿಗೆಮ್ಮ, ರೇಣುಕಮ್ಮ, ಸಾವಿತ್ರಿ, ಗೋವಿಂದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net