ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ಸಾವು

06 MANJU 04
Published on
ಹೊಸಪೇಟೆ: ಕಾಲು ಜಾರಿ ಮುಳುಗಿ ತಾಲೂಕಿನ ಹಂಪಿನಕಟ್ಟೆ ಯುವಕರಾದ ಇಮಾಮ್ (24), ರಾಜಾಭಕ್ಷಿ (25) ಮೃತಪಟ್ಟ ಘಟನೆ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಕುಟುಂಬದೊಂದಿಗೆ  ಆಗಮಿಸಿದ್ದ ಸ್ಥಳೀಯ ಯುವಕರು ನೀರಿಗೆ ಇಳಿದಿದ್ದಾರೆ. ಆಯ ತಪ್ಪಿ ಆಳಕ್ಕೆ ಹೋಗಿ ಈಜಲು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ. ಇಮಾಮಾ ಗ್ರಾಮಲೆಕ್ಕಿಗನಾಗಿ ಕಾರ್ಯರ್ನಿವರ್ಹಿಸುತ್ತಿದ್ದರು. ರಾಜಾಭಕ್ಷಿ  ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಅಗ್ನಿಶಾಮಕ ದಳದ ಸಿಬ್ನಂದಿ ಕಾರ್ಯಚರಣೆ ನಡೆಸಿ ಮೃತ ಯುವಕರನ್ನು ಹೊರಗೆ ತಗೆದಿದ್ದಾರೆ. ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net