

ಹೊಸಪೇಟೆ: ಕುಡಿವ ನೀರು ಅಮೂಲ್ಯವಾಗಿದ್ದು, ಮಿತವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಪ್ರತಿ ಜೀವಿಗೂ ಬದುಕಲು ನೀರು ಬೇಕು. ಹೀಗಾಗಿ ಜಲ ಮೂಲಗಳ ಸಂರಕ್ಷಣೆ ಮಾಡುವುದು ಹಾಗೂ ನೀರು ಪೋಲು ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕಳೆದ ಬಾರಿ ಉತ್ತಮ ಮಳೆಯಿಂದ ಇಲ್ಲಿಯ ವರೆಗೆ ಕುಡಿವ ನೀರಿನ ಯಾವುದೇ ಸಮಸ್ಯೆ ಆಗಿಲ್ಲ. ಆದರೂ, ನೀರನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಬಳಸಬೇಕು. ಜಲಮೂಲಗಳ ರಕ್ಷಣೆಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹರಪನಹಳ್ಳಿ ಪಟ್ಟಣದ ಕುಡಿವ ನೀರಿನ ಸಂಗ್ರಹಣಾ ಭಾಗವಾಗಿ ಹರಪನಹಳ್ಳಿ ತಾಲೂಕಿನ ಗರ್ಭಗುಡಿಯಲ್ಲಿ ಈಗಾಗಲೇ ಜೂನ್ ತಿಂಗಳ ವರೆಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಜಾಕ್ ವಾಲ್ ಹತ್ತಿರ ಹರಿಯುತ್ತಿರುವ ನೀರು ಸಂಗ್ರಹವಾಗುವAತೆ ಕ್ರಮ ವಹಿಸಲಾಗಿಗಿದೆ. ಬನ್ನಿಗೋಳ ಜಾಕ್ ವಾಲ್ ನಿಂದ ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ಪಟ್ಟಣಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲಿಯೂ ಸಹ ಕುಡಿವ ನೀರು ಕೊರತೆಯಾಗದಂತೆ ಈಗಾಗಲೇ ನೀರನ್ನು ಸಂಗ್ರಹಣ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ಅದಾಗ್ಯೂ ಮಿತವಾಗಿ ನೀರನ್ನು ಬಳಸುವಂತೆ ಸಾರ್ವಜನಿಕರಿಗೆ ಮೂಡಿಸಿದ್ದಾರೆ.