

ಹೊಸಪೇಟೆ: ರಾಜ್ಯಾದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ರಾಜ್ಯಾದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ವಿಜಯನಗರ ಜಿಲ್ಲೆಗೂ ಕಾಲಿಟ್ಟಿದೆ. ಪಹಣಿಯಲ್ಲಿ ರೈತರ ಹೆಸರಿದ್ದರೂ ನೀಟಿಸ್ ಜಾರಿ. ಜಿಲ್ಲೆಯ 50ಕ್ಕೂ ಅಧಿಕ ಜನರಿಗೆ ಆತಂಕ ಸೃಷ್ಟಿಯಾಗಿದೆ.
ಒಂದೆಡೆ, ವಿಜಯಪುರದಲ್ಲಿ ರೈತರು ಹಾಗೂ ಪ್ರತಿಪಕ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದೆಡೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಲಾಗಿದೆ. ಇದೀಗ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಉಸ್ತುವಾರಿ ಇರುವ ವಿಜಯನಗರದಲ್ಲೂ ಈ ಸಮಸ್ಯೆ ಎದುರಾಗಿದೆ. ಕೊಟ್ಟೂರು ತಾಲೂಕಿನಲ್ಲಿ 45 ಕ್ಕೂ ಅಧಿಕ ರೈತರಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಹೊಸಪೇಟೆ ತಾಲೂಕಿನಲ್ಲಿ 5 ಜನರಿಗೆ ನೋಟಿಸ್ ಬಂದಿದೆ ಎಂದು ತಿಳಿದು ಬಂದಿದೆ. ಇನ್ನೂ ಇತರೆ ತಾಲೂಕಿನಲ್ಲಿ ಕೂಡ ಹಲವರಿಗೆ ವಕ್ಫ್ ಮಂಡಳಿಯಿAದ ನೋಟಿಸ್ ಬಂದಿದೆ ಎನ್ನಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ವಿಜಯವಾಣಿಗೆ ತಿಳಿಸಿದರು.
ಕೊಟ್ಟೂರು ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ತಹಸೀಲ್ ಕಚೇರಿಯಿಂದ ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಆಗಿದೆ ಎನ್ನಲಾಗಿದೆ. ನೋಟಿಸ್ ನೋಡಿ ರೈತರು ಕಂಗಾಲಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ ಖಾನ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಡವರನ್ನು ಉದ್ಧಾರ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳಿ ನಮ್ಮನ್ನು ನಂಬಿಸಿ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಬಡ ರೈತರ ಜಮೀನುಗಳ ಮೇಲೆ ವಕ್ಫ್ ಎಂದು ಹೆಸರು ಸೇರ್ಪಡೆಯಾಗಿರುವುದನ್ನು ಖಂಡಿಸಿ, ಇದೇನಾ ನಿಮ್ಮ ಸರ್ಕಾರದ ಧೋರಣೆ ಎಂದು ಸಾರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವಕ್ಸ್ ಅಧಿಕಾರಿಗಳು ಅವರು ಈ ಜಮೀನನ್ನು ಕಾಲಂ(9) ಮತ್ತು 12(2)ರಲ್ಲಿ ವಕ್ಸ್ ಸಂಸ್ಥೆ ಹೆಸರಿನೊಂದಿಗೆ ವಕ್ಸ್ ಆಸ್ತಿ ಎಂದು ನಮೂದು ಮಾಡಲು ಹಾಗೂ ಕಾಲಂ 11ರಲ್ಲಿ ವಕ್ಸ್ ಆಸ್ತಿ ಪರಬಾರೆ ನೀಷೇಧಿಸಿದೆ ಎಂದು ನಮೂದಿಸುವಂತೆ ಆದೇಶಿಸಿರುತ್ತಾರೆ. ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ತಹಸೀಲ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ನಿಗಧಿಪಡಿಸಲಾಗಿದೆ. ಈ ವಿಚಾರಣೆ ದಿನದಂದು ಜಮೀನಿಗೆ ಸಂಬAಧಪಟ್ಟ ಅಗತ್ಯ ದಾಖಲಾತಿಗಳೊಂದಿಗೆ ಉಭಯ ಪಕ್ಷಗಾರರು ಸ್ವತಃ ಅಥವಾ ತಮ್ಮ ಪರ ನ್ಯಾಯವಾದಿಗಳೊಂದಿಗೆ ತಪ್ಪದೇ ಹಾಜರಿರುವಂತೆ ತಿಳಿಸಿದೆ. ಯಾವುದೇ ಪ್ರಕರಣಕ್ಕಾಗಿ ವಿಚಾರಣೆಯನ್ನು ಮುಂದೂಡಿದಲ್ಲಿ ಮುಂದಿನ ವಿಚಾರಣೆಯ ದಿನವನ್ನು ತಿಳಿದುಕೊಳ್ಳುವ ಜವಾಬ್ದಾರಿ ಉಭಯ ಪಕ್ಷದವರಾಗಿರುತ್ತದೆ. ತಪ್ಪಿದಲ್ಲಿ ಅವರ ವಿಚಾರಣೆ ಏನು ಇರುವುದಿಲ್ಲ ಎಂದು ಅವರ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ. ಇದೆ ರೀತಿ ಕೊಟ್ಟೂರು ತಾಲೂಕಿನಲ್ಲಿ 45 ಜನರಿಗೆ ಆ.09ರಂದು ನೋಟಿಸ್ ಜಾರಿಯಾಗಿದೆ. ಇದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ. ಇನ್ನೂ ಹೊಸಪೇಟೆಯಲ್ಲಿ 5 ಜನರಿಗೂ ನೋಟಿಸ್ ಜಾರಿಯಾಗಿದ್ದು, ಯಾರೂ ಕೂಡ ಬಹಿರಂಗವಾಗಿ ಹೇಳುತ್ತಿಲ್ಲ. ಜಿಲ್ಲೆಯ ಇತರೆ ತಾಲೂಕುಗಳಲ್ಲಿ ನೋಟಿಸ್ ಜಾರಿಯಾಗಿದೆ ಬಹಿರಂಗ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಕೊಟ್ಟೂರು ಪಟ್ಟಣದ ಕೊಟ್ಟೂರು ತಾಲೂಕಿನ ಕೆ.ಕೋಟ್ರಗೌಡ ಹಾಗೂ ಕೆ.ರುದ್ರಗೌಡ ಎಂಬ ಸಹೋದರರಿಗೆ ಸೇರಿದ ಸ.ನಂ. 131 ಮತ್ತು 131/1 ಜಮೀನು ನಮ್ಮದು ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ. ಕಳೆದ ವರ್ಷ ಪ್ರತ್ಯೇಕವಾಗಿ ಅಣ್ಣ ತಮ್ಮಂದಿರ ಹೆಸರಿನ ಮೇಲೆ ನಾವು ಪಹಣಿ ಬದಲಿಸಿಕೊಂಡಿದ್ದಾರೆ. ಈಗಲೂ ತಮ್ಮ ಹೆಸರಿನ ಮೇಲೆ ಪಹಣಿ ಇದೆ. ಆದರೆ ಕೊಟ್ಟೂರು ತಹಸೀಲ್ ಕಚೇರಿಯಿಂದ ನೀಡಿರುವ ನೋಟಿಸ್ ನೀಡಿದ್ದಾರೆ. ಯಾಕೆ ಎಂದು ಗೊತ್ತಿಲ್ಲ. ಇದರಿಂದ ನಮಗೆ ಗೊಂದಲವಾಗಿದೆ. ಇದ್ದ ಸ್ವಲ್ಪ ಜಮೀನು ಇದೆ ನಮಗೆ ಆಶ್ರಯ. ನಮ್ಮ ಬಡತನಕ್ಕೆ ಇದು ಸಾಲುತ್ತಿಲ್ಲ. ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಗೋಗುತ್ತಿರುವೆ ಎಂದು ರೈತ ಕೆ.ರುದ್ರಗೌಡರ ಅಳಲು ತೋಡಿಕೊಂಡಿದ್ದಾರೆ.
ಕಳೆದ ಅ.09ರಂದು ಜಿಲ್ಲೆಯ ಹಲವು ತಾಲೂಕಿನಲ್ಲಿ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಬಗ್ಗೆ ಯಾರೂ ಕೂಡ ಬಹಿರಂಗ ಪಡಿಸಬಾರದು. ಆದೇನೆ ಸಮಸ್ಯೆ ಇದ್ದರೆ ಪರಿಹರ ಮಾಡೋಣ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಯಾರೂ ಕೂಡ ಹೊರಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪವಾಗಿದೆ.
ವಿಜಯನಗರ ಮಾತ್ರವಲ್ಲ, ರಾಜ್ಯದ ಯಾವುದೇ ರೈತರಿಗೆ ಮಸ್ಯೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ರೈತರಿಗೆ ನೋಟಿಸ್ ನೀಡಿದರೆ, ಹಿಂದಕ್ಕೆ ಪಡೆಯುತ್ತೇವೆ. ರೈತರು ಗೊಂದಲಕ್ಕೆ ಓಲಗಾಗುವ ಅಗತ್ಯವಿಲ್ಲ. - ಸಚಿವ ಜಮೀರ್ ಅಹ್ಮದ್ ಖಾನ್, ವಕ್ಫ್ ಮತ್ತು ವಸತಿ ಸಚಿವ ಕೊಟ್ಟೂರು ಹಾಗೂ ಹೊಸಪೇಟೆಯಲ್ಲಿ50 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ನೋಟಿಸ್ ನೀಡಿದ್ದು ಬಹಿರಂಗ ಪಡಿಸಬಾರದು ಎಂದು ರೈತರಿಗೆ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಆದ್ದರಿಂದ ರೈತರು ನೋಟಿಸ್ ಗಳು ಬಹಿರಂಗ ಪಡಿಸುತ್ತಿಲ್ಲ. ಚನ್ನಬಸವನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ, ವಿಜಯನಗರ