

ಹೊಸಪೇಟೆ: ಕೇಂದ್ರದ ವಖ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಜಾಮೀಯ ಮಸೀದಿ ಅಡಳಿತ ಮಂಡಳಿ ನೇತೃತ್ವದಲ್ಲಿ ನಗರದ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಯಿತು.
ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ ನಿಯಾಜ್ ಮಾತನಾಡಿ, 2025ರ ವಖ್ಫ್ ಕಾಯ್ದೆ ಕಾಯ್ದೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಈ ತಿದ್ದುಪಡಿಗಳು ಸಂವಿಧಾನದ 14, 25, 26 ಮತ್ತು 29ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಕಾಯಿದೆ ಹಿಂಪಡೆಯುವವರೆಗೂ ಕೇವಲ ನಗರದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ನಿರಂತರವಾಗಿ ಹೋರಾಟಗಳನ್ನು ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಂಜುಮನ್ ಕಮಿಟಿಯ ಪ್ರಮುಖರಾದ ಗುಲಾಮ ರಸುಲ್, ಅಸ್ಲಾಂ ಮಳಗಿ, ನಾಸಿರ್, ಸಿ.ಇಂತಿಯಾಜ್, ಆಜಾಮ್, ಚಂದ್ ಭಾಷಾ, ಕೆ.ನಜೀರ್, ತಪ್ಪಡ್ ಸಾಹೇಬ್, ಲಿಯಾಕತ್, ಖಾಜಾ ಹುಸೇನ್ ನಿಯಾಜಿ ಇತರರಿದ್ದರು.