

ಹೊಸಪೇಟೆ : ವಿಜಯನಗರ ನೂತನ ಜಿಲ್ಲೆಯಾಗಿ ಮೂರು ವರ್ಷ ಕಳೆದಿದೆ. ರಾಜ್ಯ ಸರ್ಕಾರದ ಕಳೆದ ಎರಡು ಬಜೆಟ್‌ನಲ್ಲಿ ವಿಶೇಷ ಅನುದಾನ ಸಿಗಬಹುದೆಂಬ ನಿರೀಕ್ಷೆ ಹುಸಿಯಾಯಿತು. ಇನ್ನೂ ಮಂಗಳವಾರ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಜಿಲ್ಲೆಗೆ ನಿರ್ಲಕ್ಷಿಸಲಾಗಿದೆ.
ಸ್ಮಾಕರಗಳ ನಗರಿ ಹಂಪಿಗೆ ವಿಶೇಷ ಯೋಜನೆ ಭರವಸೆ ಸುಳ್ಳಾಯಿತು. ರೈತರ ಪ್ರಮುಖ ಬೇಡಿಕೆಯಾದ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಸಂಕಷ್ಟದಲ್ಲಿರುವ ಕನ್ನಡ ವಿವಿಗೆ ಅನುದಾನ, ಮೆಡಿಕಲ್ ಕಾಲೇಜು ನಿರ್ಮಾಣ ಸೇರಿ ಹಲವು ಯೋಜನೆಗಳು ಹುಸಿಯಾಗಿವೆ. ಹರಪನಹಳ್ಳಿ ಪಟ್ಟಣಕ್ಕೆ ಹಲುವಾಗಲು ಗ್ರಾಮದಿಂದ ಕೂಡಿವ ನೀರು ಹಾಗೂ ನೀರಾವರಿ ಯೋಜನೆ ಈ ಹಿಂದಿನ ಸರ್ಕಾರ ಮೀಸಲಿಟ್ಟ 45 ಕೋಟಿ ರೂ. ಕಳೆದ ಬಜೆಟ್‌ನಲ್ಲಿಯೂ ಈಡೇರಲಿಲ್ಲ. ಸಚಿವ ಸಂಪುಟದಲ್ಲೂ ನೋಡಲಿಲ್ಲ. ಹೂವಿನ ಹಡಗಲಿ ಮೈಲಾರ ಅಭಿವೃದ್ಧಿ ಪ್ರಾಧಿಕಾರ, ಕೂಡ್ಲಿಗಿ ತಾಲೂಕಿನ 74 ಕೆರೆಗಳು ತುಂಬಿಸುವ ಯೋಜನೆ 800 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮತ್ತಷ್ಟು ಅನುದಾನ ಬಿಡುಗಡೆಯಾಗುವ ಭರವಸೆ ನೀರಾಸೆಯಾಗಿದೆ. ಕೆರೆತುಂಬಿಸುವ ಯೋಜನೆ, ನೂತನ ಜಿಲ್ಲಾ ಕಚೇರಿಗಳ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳಿಗೆ ಆದ್ಯತೆ ಸಿಕ್ಕಿಲ್ಲ.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕನ್ನಡ ವಿವಿಯ ಇರುವ ಬಾಕಿ ಹಾಗೂ ವಿಶೇಷ ಅನುದಾನದ ಭರವಸೆಯಲ್ಲಿದ್ದ ಜನರಿಗೆ ಸಚಿವ ಸಂಪುಟ ಸಭೆಯಲ್ಲಿ ನಿರಾಸೆ ಮೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರೂ ಈವರೆಗೆ ಹೇಳಿಕೊಳ್ಳುವಂತಹ ಪ್ರಮುಖ ಯೋಜನೆ, ಜನರ ನಿರೀಕ್ಷೆ ಈಡೇರಿಲ್ಲ. ಕಾಂಗ್ರೆಸ್ ಸರ್ಕಾರದ ಮೊದಲ ಹಾಗೂ ಎರಡನೇ ಬಜೆಟ್‌ನಲ್ಲಿಯೂ ನಿರಾಸೆ ಆಯಿತು. ಸಿಎಂ ಆಪ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲೆಗೆ ಈ ಬಾರಿಯ ಸಚಿವ ಸಂಪುಟ ಸಭೆಯ ಹೆಚ್ಚಿನ ಯೋಜನೆಗಳೊಂದಿಗೆ ಅನುದಾನ ತರುತ್ತಾರೆಂಬ ಭರವಸೆ ಕೂಡ ಸುಳ್ಳಾಗಿದೆ. ಇಲ್ಲಿನ ಶಾಸಕರು, ಸಚಿವರು ಕೂಡ ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಯೋಜನೆಗಳು ಹಾಗೂ ಅನುದಾನ ತರುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸಪೇಟೆ ಎಚ್.ಆರ್.ಗವಿಯಪ್ಪ, ಕೂಡ್ಲಿಗಿ ಶ್ರೀನಿವಾಸ್, ಹರಪನಹಳ್ಳಿ ಎಂ.ಪಿ.ಲತಾ ಪಕ್ಷೇತರ ಆದರೂ ಕಾಂಗ್ರೆಸ್ ಗೆ ಬೆಂಬಲಿಸಿದ್ದಾರೆ. ಹೂವಿನಹಡಗಲಿ ಬಿಜೆಪಿ ಶಾಸಕ ಕಷ್ಣನಾಯ್ಕ ಹಾಗೂ ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ನೇಮಿರಾಜ್ ನಾಯ್ಕ ಅವರ ಕ್ಷೇತ್ರಗಳಲ್ಲಿ ಸಂಬAಧಿಸಿದAತೆ ಒಂದಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿದ್ದಾರೆ. ಪರಿಣಾಮ, ವಿಜಯನಗರ ಜಿಲ್ಲೆಗೆ ರಾಜ್ಯ ಸರ್ಕಾರದ ಎರಡು ಬಜೆಟ್ ಹಾಗೂ ಕಲಬುರ್ಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲೂ ಜಿಲ್ಲೆಗೆ ವಿಶೇಷ ಯೋಜನೆ ಅನುದಾನ ಕೊಟ್ಟಿಲ್ಲ.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ಸರ್ಕಾರ ವಿಶೇಷ ಅನುದಾನ ಘೋಷಣೆ ಮಾಡಿಲ್ಲ. ಕನ್ನಡ ವಿವಿ ಸಮಸ್ಯೆಗೆ ಸರ್ಕಾರ ಮದ್ದು ಹಚ್ಚಲಿದ್ದಾರೆ ಎಂಬ ಆಶಯ ಹೊಂದಲಾಗಿತ್ತು. ಆದರೆ, ಬಜೆಟ್‌ನಲ್ಲಿ ಮಾತ್ರ ಈ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ.
ಐದು ಗ್ಯಾರಂಟಿ ಯೋಜನೆಗಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಸಚಿವ ಸಂಪುಟ ಸಭೆ ಮಾಡಿ ಇಲ್ಲಿನ ಜನರ ಕಣ್ಣೋರಿಸುವ ಕೆಲಸ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯರಾಗಿದ್ದರೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ ವಿಶೇಷ ಅನುದಾನ ತರುತ್ತಿದ್ದರು. ಆದರೆ ಅವರು ಬೆಂಗಳೂರಿನವರು ಆಗಿರುವುದರಿಂದ ಸರ್ಕಾರದ ಕಣ್ಣಿನಿಂದಲೂ ಎರಡು ಜಿಲ್ಲೆಗಳು ದೂರ ಮಾಡಿದ್ದಾರೆ. ಇಲ್ಲಿನ ಶಾಸಕರು ಕೂಡ ಸರ್ಕಾರಕ್ಕೆ ಕೇಳುವಲ್ಲಿ ವಿಫಲರಾಗಿದ್ದಾರೆ. - ಚನ್ನಬಸವನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಾಕ್ಷ, ವಿಜಯನಗರ
ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವ ಸಂಪುಟ ಸಭೆ ನಡೆಯುತ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ ಮೈನಿಂಗ್ ಫಂಡ್ ಇರುವುದರಿಂದ ವಿಶೇಷ ಅನುದಾನದಲ್ಲಿ ಘೋಷಣೆಯಾಗಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಘೋಷಣೆಯಾಗುವ ಅನುದಾನದಲ್ಲಿ ಸರಿಸಮವಾಗಿ ನಮ್ಮ ಜಿಲ್ಲೆಗೂ ಬರಲಿದೆ. - ಸಿರಾಜ್ ಶೇಕ್, ಕಾಂಗ್ರೆಸ್ ಜಿಲ್ಲಾಧ್ಯಾಕ್ಷ, ವಿಜಯನಗರ