ಯುವಕರು ವಿವೇಕ ವಾಣಿಯಂತೆ ನಡೆಯಲಿ

news
ಹೊಸಪೇಟೆ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಯುವ ಸಮ್ಮೇಳನದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
Published on

ಹೊಸಪೇಟೆ: ದೇಶದಲ್ಲಿ ಸ್ವಾತಂತ್ರö್ಯ ನಂತರವು ನಿರಾಳ ಭಾವ ಮೂಡುತ್ತಿದ್ದು, ಯುವಜನತೆ ಈಗಲಾದರೂ ತಮ್ಮ ಜಡತ್ವವನ್ನು ಬದಿಗಿಟ್ಟು ಸೆಟೆದು ನಿಲ್ಲಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ ಹಾಗೂ ಶ್ರೀ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಅರ್ಧವಾರ್ಷಿಕ ಸಭೆಯ ಹಿನ್ನೆಲೆಯಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಯುವ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದರು.

ಪ್ರಸ್ತುತ ಸಮರ್ಥ ನಾಯಕತ್ವ ನಮ್ಮ ದೇಶಕ್ಕೆ ಇರುವ ಕಾರಣಕ್ಕೆ ಶತ್ರುಗಳು ಸಹ ನಮ್ಮನ್ನು ಕಂಡು ಭಯಪಡುವ ಸ್ಥಿತಿ ಇದೆ. ವಿವೇಕಾನಂದರು ಹೇಳಿದಂತಹ ದೇಶದಲ್ಲಿಗ ನಾಯಕತ್ವ ಗುಣ ಪ್ರದರ್ಶನ ಆಗುತ್ತಿದೆ. ಈ ಹಂತದಲ್ಲೂ ನಮ್ಮ ಯುವಜನತೆ ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ವಿವೇಕ ವಾಣಿಯಂತೆ ನಡೆಯುವ ಧೈರ್ಯ ತೋರಬೇಕು. ವಿವೇಕಾನಂದರ ಚಿಂತನೆಗಳು ನಮ್ಮ ಮುಂದಿವೆ. ಯುವಜನತೆಯ ಮೇಲೆ ಅವರು ಇಟ್ಟಿದ್ದ ಅಪಾರ ನಂಬಿಕೆಯನ್ನು ಸಾಕಾರಗೊಳಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.

ಗದಗ-ವಿಜಯಪುರ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದಜಿ ಸ್ವಾಮೀಜಿ ಮಾತನಾಡಿ, ಭಾರತೀಯರ ರಕ್ತದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಅನಾಗರಿಕ ದೇಶದವರನ್ನೂ ನಾಗರಿಕರನ್ನಾಗಿ ಮಾಡಿದ್ದು ನಾವು. ನಾವೆಲ್ಲ ಸಿಂಗಳಾದರೂ ಕುರಿಗಳಂತೆ ಬದುಕಿದ್ದೇವೆ. ವಿವೇಕಾನಂದರೇ ನಿಮಗೆ ಪ್ರೇರಣೆ ಆಗದಿದ್ದರೆ ಜಗತ್ತಿನಲ್ಲಿ ಬೇರೆ ಯಾರೂ ಪ್ರೇರಣೆ ಆಗಲು ಸಾಧ್ಯವಿಲ್ಲ, ವಿದ್ಯಾರ್ಥಿಗಳಿಗೆ ವಿವೇಕ ಸಂದೇಶ ತಲುಪುವ ಕೆಲಸವಾಗಬೇಕು ಎಂದರು.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಯುವಕರು ಶೈಕ್ಷಣಿಕ ಸವಾಲುಗಳನ್ನು ಎದುರಿಸುವಲ್ಲಿ ವಿವೇಕಾನಂದರ ಚಿಂತನೆ ನೆರವಿಗೆ ಬರುತ್ತದೆ. ಶೈಕ್ಷಣಿಕ ಸಾಧನೆ ಮಾತ್ರವಲ್ಲ, ಯುವಕರ ಆಂತರಿಕ ಶಕ್ತಿಯನ್ನು ಉತ್ತೇಜಿಸುವ ಕೆಲಸ ಆಗಬೇಕು, ಇದುವರೆಗೆ ಅದು ಆಗಿರಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net