ವಿಠಲ, ರುಕ್ಮಿಣಿ ವಿಗ್ರಹಗಳ ಪ್ರತಿಷ್ಠಾಪನೆ

21 MANJU 07
Published on

ಹೊಸಪೇಟೆ: ಭಾವಸಾರ ಕ್ಷತ್ರಿಯ ಸಮಾಜದಿಂದ ತಾಲೂಕಿನ ಕಮಲಾಪುರದಲ್ಲಿ ಗುರುವಾರ ನೂತನವಾಗಿ ಪಾಂಡುರAಗ ವಿಠಲ, ರುಕ್ಮಿಣಿ ದೇವಿಯ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಗರುಡ ಆಂಜನೇಯ ದೇವರ ಪುನರ್ ಪ್ರತಿಷ್ಠಾಪನೆ ಗುರುವಾರ ಜರುಗಿತು.

ಪಂಡರಾಪುರದ ಶ್ರೀ ಪ್ರಭಾಕರ್ ದಾದಾ ಬೋದಲೇ ಮಹಾರಾಜ್ ಇವರ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಈ ಭಾಗದಲ್ಲಿ ಪಾಂಡು ವಿಠಲ, ರುಕ್ಮಿಣಿ ಮಾತೆಯ ಸಾವಿರಾರು ಭಕ್ತರಿದ್ದಾರೆ. ಕಮಲಾಪುರ ಸುತ್ತ ಮುತ್ತ ಪಾಂಡುರAಗ ವಿಠಲ ಮತ್ತು ರುಕ್ಮಿಣಿ ಮಾತೆಯ ದೇಗುಲದಿಂದ ಅನುಕೂಲ ಆಗಲಿದೆ ಎಂದರು.

ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಪಾಂಡುರAಗನ ಕೀರ್ತನೆ ನಡೆಯಿತು. ಹಾಗೂ ಮಹಾಪ್ರಸಾದ ನೆರವೇರಿಸಲಾಯಿತು. ಕ್ಷತ್ರಿಯ ಸಮಾಜದ ಮುಖಂಡರಾದ ಗೋಪಾಲಕೃಷ್ಣ ಪಟ್ಟಿಗೆ, ಜ್ಞಾನೋಜಿ ರಾವ್ ಇಜಂತ್ಕಾರ್, ರಮೇಶ್ ಪಟ್ಟಿಗೆ, ಹರೀಶ್ ಜಿಂಗಾಡೆ, ವಿಶ್ವನಾಥ್ ಜಿಂಗಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net