

ಹೊಸಪೇಟೆ: ತಾಲೂಕಿನ ಕಮಲಾಪುರ ಶ್ರೀ ಕಾಳಿಕಾ ದೇವಿಯ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಭಗವಾನ್ ವಿಶ್ವಕರ್ಮ ಜಯಂತ್ಯೋತ್ಸವ ನಡೆಯಿತು.
ಪಟ್ಟಣದ ಕೆರೆಯ ಬಳಿಯ ಗಣೇಶನ ಗುಡಿಯಿಂದ ವಿಶ್ವಕರ್ಮನ ಭಾವಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ ಹೊತ್ತು ಸಾಲಾಗಿದರೆ, ವಿವಿಧ ಜಾನಪದ ಕಲತಂಡಗಳು ಮೆರಗು ನೀಡಿದವು.
ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ, ಪಂಚ ಕಸುಬುಗಳನ್ನು ಮಾಡುವ ವಿಶ್ವಕರ್ಮರು ಜಗತ್ತನ್ನು ಸುಂದರಗೊಳಿಸಿದ್ದಾರೆ. ಶ್ರೀ ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ ಮತ್ತು ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಜಗತ್ತು ಸುಂದರವಾಗಿ ಕಾಣಲು ವಿಶ್ವಕರ್ಮ ಸಮಾಜವೇ ಕಾರಣ. ಒಮ್ಮತದಿಂದ ಜೀವಿಸಿ ಸೂಕ್ಷ÷್ಮ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸಬೇಕು ಎಂದರು.