ಮಹಿಳಾ ವಿಚಾರ ಸಂಕಿರಣಕ್ಕೆ ಅರ್ಜಿ ಅಹ್ವಾನ

Published on

ಹೊಸಪೇಟೆ : ಹಂಪಿ ಉತ್ಸವದ ನಿಮಿತ್ತ ಶ್ರೀವಿರೂಪಾಕ್ಷ ದೇವಸ್ಥಾನದ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿ, ಮಹಿಳಾ ವಿಚಾರ ಸಂಕಿರಣ ಹಾಗೂ ಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವರಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಗರದ ಚಿತ್ತವಾಡಿಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಫೆ.12 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯ್ಕೆ ಸಮಿತಿಯಿಂದ ಮೇಲ್ಕಂಡ ವಿವಿಧ ಗೋಷ್ಠಿಗಳಿಗೆ ಆಯ್ಕೆಯಾದವರಿಗೆ ದೂರವಾಣಿ ಮೂಲಕ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಜಗದೀಶ್ ಬೆನ್ನೂರು : ಮೊ.9901106256, ಡಾ.ದಯಾನಂದ ಕಿನ್ನಾಳ್ 9449654234 ಸಂಪರ್ಕಿಸಬಹುದು ಎಂದು ಚಿತವಾಡ್ಗಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net