ಜಿಲ್ಲೆಯಲ್ಲಿ ಉತ್ತಮ ಮಳೆ

Rainfall
ಹೊಸಪೇಟೆಯಲ್ಲಿ ಮಧ್ಯಾಹ್ನ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸೈಕಲ್ನಲ್ಲಿ ಹೊರೆಟ ಯುವತಿ
Published on

ಹೊಸಪೇಟೆ: ಜಿಲ್ಲೆಯ ನಾನಾ ಕಡೆ ಗುರುವಾರ ರಾತ್ರಿ ಗುಡುಗು, ಮಿಂಚಿನೊಂದಿಗೆ ಉತ್ತಮ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ ಕೂಡ ಅರ್ದ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಡಗು-ಸಿಡಿಲು ಸಹಿತ ರಾತ್ರಿ ಮಳೆ ಸುರಿಯಿತು. ಹೊಸಪೇಟೆ ತಾಲೂಕಿನಲ್ಲಿ 15.48 ಮಿ.ಮೀ ಮಳೆಯಾಗಿದೆ. ಹೂವಿನಹಡಗಲಿ 9.10 ಮಿ.ಮೀ ಮಳೆಯಾಗಿದೆ. ಹಗರಿಬೊಮ್ಮನಹಳ್ಳಿ 11.45 ಮಳೆಯಾಗಿದೆ. ಹರಪನಹಳ್ಳಿ 7.03 ಮಿ.ಮೀ ಮಳೆಯಾಗಿದೆ. ಕೊಟ್ಟೂರು 22.61 ಮಿ.ಮೀ ಮಳೆಯಾಗಿದೆ. ಕೂಡ್ಲಿಗಿ 34.68 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ. ಶುಕ್ರವಾರ ದಿನವಿಡಿ ಮೋಡಕವಿದ ವಾತಾವರಣವಿತ್ತು. ಆಗಾಗ ಮಳೆ ಸುರಿಯುತ್ತಿತ್ತು. ಮಾರುಕಟ್ಟೆಗೆ ಬಂದ ವಾಹನ ಸವಾರರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net