

ಹೊಸಪೇಟೆ: ಗೃಹಸಚಿವರನ್ನು ನಿಂದಿಸಿದ ನಗರಸಭೆ ಸದಸ್ಯರನ್ನು ಬಂಧಿಸಿ, ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ ಸಂಘದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರಗೆ ನಿಂದಿಸಿದ ಬೀದರ ನಗರಸಭಾ ಸದಸ್ಯ ವಿರೂಪಾಕ್ಷ ಗದಗಿ ಅವರನ್ನು ಬಂಧಿಸಬೇಕು. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆ ವೇಳೆ ವಿರೂಪಾಕ್ಷ ಅವರು ಮಾತನಾಡುವಾಗ, ಗೃಹಸಚಿವರ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಅವಹೇಳನಕಾರಿಯಾಗಿ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರದಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ, ಪ್ರಮುಖರಾದ ಜೆ.ಶಿವಕುಮಾರ್, ರಾಮಚಂದ್ರ ಬಾಬು, ಕಾರಿಗೆನೂರು ರಾಮಕೃಷ್ಣ, ಜೆ.ಸಿ.ಈರಣ್ಣ, ಸಣ್ಣ ಮಾರೆಪ್ಪ, ಸಿ.ನೀಲಕಂಠ, ಚಂದ್ರಶೇಖರ್, ಕೊಟ್ರೇಶ್, ಇಂತಿಯಾಜ್, ಸಜ್ಜಾದ್ ಖಾನ್, ಸಿ.ರಮೇಶ್, ಶೇಖರ್, ಕಾಳಿ ರಾಮು, ಬಿ.ಹನುಮಂತಪ್ಪ, ಮಹಂತೇಶ್ ಇತರರಿದ್ದರು.