ವಿಜಯನಗರ ಜಿಲ್ಲೆಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ

09 MANJU 01
Published on

ಹೊಸಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಅವಮಾನಿಸಿದ ಕೇಂದ್ರ ಸಚಿವ ಅಮಿತ ಷಾ ರವರನ್ನು ಮಂತ್ರಿ ಮಂಡಲದಿAದ ವಜಾಗೊಳಿಸುವಂತೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಕರೆ ಕೊಟ್ಟಿದ್ದ ವಿಜಯನಗರ ಜಿಲ್ಲೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸಪೇಟೆ ನಗರ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟು ಹಾಗೂ ಸಾರಿಗೆ ಸಂಚಾರ ಸ್ಥಗಿತಗೊಂಡಿತು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದರೆ ಸರ್ಕಾರಿ ಶಾಲೆಗಳು ಎಂದಿನAತೆ ತೆರೆದಿದ್ದವು. ಆಟೊ ಸಂಚಾರ ಎಂದಿನAತೆ ಕಂಡುಬAದಿತು. ಇನ್ನೂ ಹೊರತು ಪಡಿಸಿ ವಾಹನಗಳ ಸಂಚಾರ ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಲ್ಲಿ ಬಂದ್ ನಡೆದಿಲ್ಲ.

ನಗರದಲ್ಲಿ ಗುರುವಾರ ವಾರದ ರಜೆ ಇರುತ್ತದೆ. ಇದರಿಂದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮುಖ್ಯ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಮುಚ್ಚಿದ್ದು, ಮಾರ್ಕೆಟ್ ಒಳಭಾಗದಲ್ಲಿ ಮಾಂಸದ ಅಂಗಡಿಗಳು ಹಾಗೂ ಕೆಲವೊಂದು ರೆಸ್ಟೋರೆಂಟ್‌ಗಳು ತೆರೆದಿದ್ದವು. ಖಾಸಗಿ ಕಂಪಿನಿಗಳು ಬಾಗಿಲು ಮುಚ್ಚಿಕೊಂಡು ದಿನದ ಕಾರ್ಯ ನಡೆಸಿದವು. ಇನ್ನು ಆಟೋ ಸಂಚಾರ ಎಂದಿನAತಿತ್ತು. ಹೆದ್ದಾರಿ ಸಂಚಾರಕ್ಕೆ ಸಮಸ್ಯೆಯಾಗಲಿಲ್ಲ. ಬೆಳಗ್ಗೆ 6ರಿಂದ ಸಾರಿಗೆ ಬಸ್‌ಗಳು ಸಂಚರಿಸಲಿಲ್ಲ. ವಾಲ್ಮೀಕಿ ವೃತ್ತದಿಂದ ಮದಕರಿವೃತ್ತ, ಪುನೀತ್ ರಾಜಕುಮಾರ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಯಿತು. ಲಾರಿ ಮಾಲೀಕರ ಸಂಘ, ಆಟೋ ಮಾಲೀಕರು ಮತ್ತು ಚಾಲಕರ ಸಂಘ ಸೇರಿದಂತೆ 80ಕ್ಕೂ ಹೆಚ್ಚಿನ ಪ್ರಗತಿಪರ ಸಂಘಟನೆಗಳು ಜಿಲ್ಲಾ ಬಂದ್‌ಗೆ ಬೆಂಬಲ ಸೂಚಿಸಿದ್ದವು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಕೇಂದ್ರ ಸಚಿವ ಅಮಿತ ಷಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು. ಬಳಿಕ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಚಾಲಕ ಎಂ.ಜAಬಯ್ಯ ನಾಯಕ ಮಾತನಾಡಿ, ಅಮಿತ ಷಾ ಸಂವಿಧಾನದ ಫಲದಿಂದ ದೇಶದ ಉನ್ನತ ಹುದ್ದೆಗಳಲ್ಲೊಂದಾದ ಗೃಹ ಸಚಿವ ಸ್ಥಾನವನ್ನು ಅಲಂಕರಿಸಿ ಅದೇ ಸಂವಿಧಾನವನ್ನು ರಚಿಸಿದಂತಹ ಡಾ.ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದರು. ಅಮಿತ್ ಶಾ ಈ ಹಿಂದೆ ಗಡಿಪಾರ್ ಆದಂತಹ ವ್ಯಕ್ತಿ ಅಂತಹ ವ್ಯಕ್ತಿ ಇನ್ನು ಕೂಡ ಸುಧಾರಿಸಿಕೊಂಡಿಲ್ಲ. ಪದೇ ಪದೇ ಅಂಬೇಡ್ಕರ್ ವಿಚಾರದಲ್ಲಿ ಇಂತಹ ಅವಮಾನಕರ ಘಟನೆಗಳು ಜರುಗುತ್ತಲೇ ಇವೆ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ ಮಾತನಾಡಿ, ಅಮಿತ್ ಷಾ ಅಂಬೇಡ್ಕರ್‌ರಿಗೆ ಅವಮಾನ ಮಾಡಿದ್ದು ಇಡೀ ಮಾನವ ಕುಲ ತಲೆ ತಗ್ಗಿಸುವಂತದ್ದು, ಅವರನ್ನು ಅಟ್ರಾಸಿಟಿ ಮೊಕದ್ದಮೆಯಲ್ಲಿ ಬಂಧಿಸಿ ಸಚಿವ ಸಂಪುಟದಿAದ ವಜಾಗೊಳಿಸಬೇಕೆಂದು. ಕೇಂದ್ರ ಗೃಹ ಸಚಿವ ದೇವರ ಹೆಸರನ್ನು ಸ್ಮರಿಸಿದರೇ, ಉದ್ದಾರ ಆಗುವುದಾದರೆ, ಅವರ ಪುತ್ರನ ಕೈಯಲ್ಲಿ ಗಂಟೆ-ಜಾಗಟೆ ನೀಡಿ ದೇಗುಲದಲ್ಲಿ ಭಜನೆ ಮಾಡಿಸಬೇಕಿತ್ತು. ಅಂಬೇಡ್ಕರ್ ಅವರ ಅವಾಮಾನ ಸಹಿಸಿಕೊಳ್ಳುವ ಪ್ರಶ್ನೆಯಿಲ್ಲ ಎಂದರು.

ಪ್ರಮುಖರಾದ ವೆಂಕಟರಾಮಣ್ಣ, ನಿಮಗಲ್ ರಾಮಕೃಷ್ಣ, ರವಿಕುಮಾರ್, ವೈ.ರಾಮಚಂದ್ರ ಬಾಬು, ಚಾಂದ್ ಭಾಷಾ, ಮೊಹಮ್ಮದ್, ಅಸ್ಲಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net