

ಹೊಸಪೇಟೆ: ದಾವಣಗೆರೆಯ ರಾಜನ ಹಳ್ಳಿಯಲ್ಲಿ ಇಲ್ಲಿನ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಲೋಗೋ ಬಿಡುಗಡೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಬದಲಾವಣೆಗಾಗಿ ನಗರದ ವಾಲ್ಮೀಕಿ ನಾಯಕ ಸಮಾಜದ ಕೆಲ ಸಮಾನ ಮನಸ್ಕ ಪದವೀಧರರು ಸೇರಿ ಶ್ರೀ ವಾಲ್ಮೀಕಿ ನಾಯಕ ಪದವೀದರರ ವಿದ್ಯಾವರ್ಧಕ ಸಂಘ ಸ್ಥಾಪಿಸಿದ್ದಾರೆ.
ತುಮಕೂರು ಜಿಲ್ಲಾ ಧರ್ಮದರ್ಶಿ ಶಾಂತಲಾ, ಬಳ್ಳಾರಿ ವಿಜಯನಗರ ಜಿಲ್ಲಾ ಧರ್ಮದರ್ಶಿಗಳಾದ ಬಿ.ಎಸ್.ಜಂಬಯ್ಯನಾಯಕ, ಸಂಘದ ಅಧ್ಯಕ್ಷ ಡಾ.ಗುಂಡಿ ಮಾರುತಿ, ಪ್ರಧಾನ ಕಾರ್ಯದರ್ಶಿ ಗೋಸಲ ಬಸವರಾಜ್, ಸಂಚಾಲಕ ಕಾರ್ಯದರ್ಶಿ ಎನ್.ವೆಂಕಟೇಶ್, ಕಿರಣ್, ಪ್ರಕಾಶ್‌ಗುಂಡಿ, ಬಂಡಿ ಶ್ರೀಕಾಂತ, ಕಿಚಿಡಿ ಶಿವು, ಬಾಣದ ಮುರಳಿ, ಡಾ.ಯಲ್ಲೇಶ್ ಪೂಜಾರಿ ಹೊನ್ನೂರಪ್ಪ, ಬಂಡ ಅರುಣ್ ಕುಮಾರ್ ಇತರರಿದ್ದರು.