ಗೂಡ್ಸ್ ವಾಹನ ಪಲ್ಟಿ ಓರ್ವ ಸಾವು

IMG-20250803-WA0034
Published on

ಹೂವಿನಹಡಗಲಿ : ತಾಲೂಕಿನ ಹೊನ್ನೂರು ಸಮೀಪದಲ್ಲಿ ಗೂಡ್ಸ್ ವಾಹನವೊಂದು ಪಲ್ಟಿಯಾಗಿ ಬಿಹಾರ ಮೂಲದ ಸುನೀಲ್ (25) ಎಂಬ ಯುವಕ ಮೃತಪಟ್ಟ ಘಟನೆ  ಭಾನುವಾರ ಸಂಜೆ ನಡೆದಿದೆ.

ಸಿಂಗಟಾಲೂರು ಏತನೀರಾವರಿ ಯೋಜನೆ ಬ್ಯಾರೇಜ್‌ಕಡೆಯಿಂದ ಬರುತ್ತಿದ್ದ ಗೂಡ್ಸ್ ವಾಹನ ಹೊನ್ನೂರು ಗ್ರಾಮದ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣತಪ್ಪಿ  ಪಲ್ಟಿಯಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಸುನೀಲ್ ವಾಹನದ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಾಹನದಲ್ಲಿದ್ದ ಇನ್ನುಳಿದ  ನಾಲ್ವರನ್ನು ಸ್ಥಳೀಯರು ಪಶು ಇಲಾಖೆಯ ತುರ್ತುವಾಹನದಲ್ಲಿ  ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ದೀಪಕ್‌ ಬೂಸರೆಡ್ಡಿ, ಪಿಎಸ್‌ಐ ಮಣಿಕಂಠ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net