ವೀರಸಂಗಯ್ಯಗೆ ರಾಜ್ಯೋತ್ಸವ ಪ್ರಶಸ್ತಿ

30 MANJU 06
Published on

ಹೊಸಪೇಟೆ: ಹೋರಾಟವನ್ನೇ ಮೈಗೂಡಿಸಿಕೊಂಡು ಚಿಕ್ಕವಯಸ್ಸಿನಿಂದಲೇ ಬೆಳೆದು ಬಂದ ವ್ಯಕ್ತಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸAಗಯ್ಯನವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇವರು ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ್‌ಹೆಗ್ಡಾಳ್‌ದ ಇವರು ಪದವಿ ಶಿಕ್ಷಣ ಪಡೆದಿದ್ದಾರೆ. ಸಮಾಜದಲ್ಲಿ ಅನ್ಯಾಯ ಕಂಡರೆ ಸಾಕು ಯಾವ ಸ್ಥಳ ಕೂಡ ನೋಡದೇ ಅವರ ವಿರುದ್ಧ ಹೋರಾಟ ಇಳಿಯುತ್ತಾರೆ. ಸಂಘಟಕರು ಹೋರಾಟಗಳನ್ನೇ ಕೈಬಿಟ್ಟರೂ ವೀರಸಂಗಯ್ಯ ನವರು ಮಾತ್ರ ಈ ವಯ್ಯಸಿನ್ನಲೂ ಹೋರಾಟ ಮಾಡುತ್ತಿದ್ದಾರೆ. ರೈತರ ನೋವುಗಳಿಗೆ ಬೆನ್ನೆಲುಬಾಗಿ ನಿಂತ್ತಿದ್ದಾರೆ.

ಸAಘಜೀವಿ ಸಂಘಟನೆ, ಎಸ್.ಎಫ್.ಐ, ರೈತ ಸಂಘಟನೆ, ಜನಪರ ಸಂಘಟನೆ, ಎದ್ದೇಳು ಕರ್ನಾಟಕ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತಮ್ಮ ಹೋರಾಡಿದ್ದಾರೆ. ಸಧ್ಯ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದಾರೆ. ಸಮಾನ ವಿದ್ಯುತ್‌ಗಾಗಿ ಹೋರಾಟ ಕೈಗೊಂಡಾಗ ಆಗಿರುವ ಪೊಲೀಸ್ ಹಲ್ಲೆಯಲ್ಲಿ ಕಿಡ್ನಿ ವೈಫಲ್ಯವಾಯಿತು. ಜೀವನ್ಮರಣ ಹೋರಾಟದ ಸಂದರ್ಭದಲ್ಲಿ ಇವರ ಸಹೋದರ ಜೆ.ಎಂ.ರುದ್ರಮುನಿ ತಮ್ಮ ಕಿಡ್ನಿಯನ್ನು ಇವರಿಗೆ ಕೊಟ್ಟು, ಸಾರ್ಥಕ ಜೀವನ ಮೆರೆದಿದ್ದಾರೆ.

ಇವರಿಗೆ ನಾನಾ ಸಂಘಟನೆಗಳು ಪ್ರಶಸ್ತಿಗಳಾದ ಕೆಂಪೇಗೌಡ, ಬೋಧಿ ಪ್ರಶಸ್ತಿ, ರಕ್ಷಣಾ ವೇದಿಕೆಯಿಂದ ಪ್ರಶಸ್ತಿಗಳು, 9ನೇ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಶಿ ನಿಂಗಪ್ಪ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ರಾಜ್ಯ ರೈತರಿಗೆ ಹಾಗೂ ನನ್ನೊಂದಿಗೆ ಸದಾ ಹೋರಾಟದ ಸಹಕರಿಸುತ್ತಾ ಮುಂಚುಣ್ಣಿಯಲ್ಲಿದ್ದ ನನ್ನೆಲ್ಲಾ ಹೋರಾಟಗಾರರಿಗೆ ಸಿಕ್ಕ ಪ್ರಶಸ್ತಿಯಾಗಿದೆ. - ವೀರಸಂಗಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸೃತರು. ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net