ವಿವಿಧೆಡೆ ವಿದ್ಯುತ್ ವ್ಯತ್ಯಯ

Published on

ಹೊಸಪೇಟೆ: ನಗರದಲ್ಲಿನ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 24 ರಂದು, ಬೆಳಿಗ್ಗೆ 9 ಗಂಟೆಯಿAದ ಸಂಜೆ 6 ಗಂಟೆವರೆಗೆ ನಿರ್ವಹಣಾ ಕೆಲಸ ಮತ್ತು ಇತರೆ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಗರದ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ಸುತ್ತ ಮುತ್ತಲಿನ ಪ್ರದೇಶಗಳಾದ ಬಸವೇಶ್ವರ ಬಡವಾಣೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಡಾ.ಪುನೀತ್ ರಾಜಕುಮಾರ್ ವೃತ್ತ, ರಾಜೀವ ನಗರ, ರೈಲ್ವೆ ಸ್ಟೇಷನ್, ಅಮರಾವತಿ, ಚಿತ್ತವಾಡಗಿ, ಹಂಪಿ ರೋಡ್, ನೌಕರ ಕಾಲೋನಿ, ಗಾಂಧಿಚೌಕು, ಕೋರ್ಟ್, ರಾಣಿಪೇಟೆ, ಬೆನಕಾಪುರ, ಬಸವನದುರ್ಗ, ನಾಗೇನಹಳ್ಳಿ ಹಾಗೂ ನರಸಾಪುರ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net