ಪರಿಸರ ಉಳಿದರೆ ಬದುಕಲು ಸಾಧ್ಯ

news
ಹೊಸಪೇಟೆ ಹೊರವಲಯದ ಜಂಬುನಾಥನಹಳ್ಳಿ ಗುಡ್ಡದ ಬಳಿ ವನಮಹೋತ್ಸವ ಕಾರ್ಯಕ್ರಮ ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಿದರು.
Published on

ಹೊಸಪೇಟೆ: ಪರಿಸರ ಎನ್ನುವುದು ನಮಗೆ ಜೀವನವಿದ್ದಂತೆ, ಸುಂದರವಾದ ಪರಿಸರವನ್ನು ನಾವು ನಿರ್ಮಾಣ ಮಾಡಬೇಕಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ಅರಣ್ಯ ಇಲಾಖೆಯಿಂದ ನಗರದ ಹೊರವಲಯದ ಜಂಬುನಾಥನಹಳ್ಳಿ ಗುಡ್ಡದ ಬಳಿ ಗುರುವಾರ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರದಿಂದ ನಮಗೆ ಉತ್ತಮವಾದ ಆಮ್ಲಜನಕ ದೊರೆಯುತ್ತದೆ. ಪರಿಸರ ಉಳಿದರೆ ಮಾತ್ರ ನಾವೂ ಬದುಕಲು ಸಾಧ್ಯ. ಆದ್ದರಿಂದ ಉತ್ತಮವಾದ ಪರಿಸರದ ವಾತಾÀವರಣವನ್ನು ನಿರ್ಮಿಸಬೇಕು. ವರ್ಷಕ್ಕೆ 5 ಗಿಡಗಳನ್ನಾದರು ನೆಡಬೇಕು ಎಂದು ಸಲಹೆ ನೀಡಿದರು

ಬಳ್ಳಾರಿಯ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಜೆ.ರವಿ ಮಾತನಾಡಿಡಿ, ತಾಯಿ ಹೆಸರಿನಲ್ಲಿ ನಾವು ಗಿಡಗಳನ್ನು ನೆಟ್ಟಿದ್ದೇವೆ. ಸರ್ವಕಾಲಕ್ಕೂ ತಾಯಿಯೇ ಶ್ರೇಷ್ಠ, ಅವಳ ಹೆಸರಲ್ಲಿ ಗಿಡವನ್ನು ನೆಟ್ಟರೆ ಆ ಮರಗಳು ಸಮೃದ್ದಿಯಾಗಿ ಬೆಳೆಯುತ್ತವೆ. ನಮ್ಮಲ್ಲಿ ವಿವಿಧ ಜಾತಿಯ ಅನೇಕ ಮರಗಳಿವೆ. ಹೆಚ್ಚು ಮರಗಳಿದ್ದರೆ ಪರಿಸರ ಸುಂದರವಾಗಿ ಕಾಣುತ್ತದೆ. ಹಾಗೂ ಉತ್ತಮವಾದ ಗಾಳಿಯು ನಮಗೆ ಸಿಗುತ್ತದೆ ಎಂದರು.

ಎಸ್ಪಿ ಬಿ.ಎಲ್.ಹರಿಬಾಬು, ವಿಜಯನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಉಪವಿಭಾಗಿಯಾಧಿಕಾರಿ ಎನ್.ಮಹಮ್ಮದ್ ಅಲಿ ಅಕ್ರಮ್ ಶಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ, ನಗರಸಭೆ ಆಯುಕ್ತ ಈರಣ್ಣ, ಬಿಇಒ ಚನ್ನಬಸಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯ್ಕ್, ಡಿಎಫ್‌ಒಗಳಾದ ಭರತ್‌ರಾಜ್, ಕೆ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net