

ಹೊಸಪೇಟೆ: ಬಿ.ಆರ್.ಅಂಬೇಡ್ಕರ್ ಅವರ ಪ್ರಕಾರ ಪ್ರಜಾಪ್ರಭುತ್ವ ವ್ಯವ್ಯಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಸ್ಥಾನಮಾನ ಸಿಗುವುವರೆಗೂ ಸ್ವಾತಂತ್ರಕ್ಕೆ ಅರ್ಥವಿಲ್ಲ ಎಂದು ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಅಭಿಪ್ರಾಯ ಪಟ್ಟರು.
ನಗರದ ಶ್ರೀಪುಣ್ಯಾನಂದಪುರಿ ಮಂಟಪದಲ್ಲಿ ಶನಿವಾರ ಶ್ರೀವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘ ಉದ್ಘಾಟಿಸಿ ಮಾತನಾಡಿದರು. ಜ್ಞಾನಕ್ಕೆ ಮಿಗಿಲಾದ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಮನೆಯಲ್ಲಿ ಪ್ರತಿಯೊಬ್ಬ ತಾಯಿ ಸಾವಿತ್ರಿಬಾಯಿ ಫುಲೆ ಆಗಬೇಕಿದೆ. ನಮ್ಮ ಸಮುದಾಯದಲ್ಲಿರುವ ಒಂದೊಂದು ಒಳೆ ಗುಣಗಳು ಹೊರತಂದರೆ ಬದಲಾವಣೆ ಸಾಧ್ಯ. ಶಿಕ್ಷಣ ಕರೋನ ಇದಂಗೆ. ತಟ್ಟಿದರೆ ಇನ್ನೊಬರಿಗೆ ಹೇಗೆ ಹರಡುತ್ತದೆ ಹಾಗೆ ಶ್ರೀ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘ ವಿದ್ಯಾರ್ಥಿಗಳಿಗೆ ದಾರಿಯಾಗಲಿ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಬದಲಾವಣೆ ಏನಾಗಿದೆ ಎಂಬುದು ಮೆಲುಕು ಹಾಕಬೇಕಿದೆ. ಸ್ವಾತಂತ್ರ್ಯ ಬಡವರ ಮನೆಗೆ ಬರಲಿಲ್ಲ ಬೆಳಕು ತರಲಿಲ್ಲ ಸಿದ್ದಲಿಂಗಯ್ಯವರ ಹಾಡು ಅರ್ಥಪೂರ್ಣವಾಗಿದೆ. ಪೌರಾಣಿಕ, ಆಧ್ಯಾತ್ಮಿಕ, ಐತಿಹಾಸಿಕವಾಗಿ ವಾಲ್ಮೀಕಿ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ. ರಾಜ್ಯದ 4ನೇ ಬಹುದೊಡ್ಡ ಸಮುದಾಯ ಬದಲಾವಣೆ ಆಗಬೇಕಿತ್ತು. ಆದರೆ ಸ್ವಾತಂತ್ಯ ಬಂದು 75 ವರ್ಷ ಕಳೆದರು ಅಭಿವೃದ್ಧಿಯ ಮಾತಿಲ್ಲ. ಸಮುದಾಯದ 90 ರಷ್ಟು ಜನಸಂಖ್ಯೆಯಲ್ಲಿ 10 ಸಾವಿರ ರೂ. ಆದಾಯ ಮಿರುತ್ತಿಲ್ಲ. ಇದಕ್ಕೆ ಕಾರಣ ಎಂದರೆ ಸಮುದಾಯದ ಅಸಡೆ, ಸೊಮಾರಿತನ, ರಾಜಕೀಯ ವ್ಯಕ್ತಿಗಳ ಜೈಕಾರ, ಹಿಂಬಾಲಿಕೆಯೇ ಹಿಂದುಳಿಯಲು ಕಾರಣವಾಗಿದೆ. ಕೇಂದ್ರ ಸರ್ಕಾರದಲ್ಲಿ 4.60 ಕೋಟಿ, ರಾಜ್ಯ ಸರ್ಕಾರದಲ್ಲಿ 5.5 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ವರಿಗೂ ಸಹಬಾಳು ಮತ್ತು ಸಮಪಾಲು ವಾಖ್ಯಾದಲ್ಲಿ ಪ್ರತಿಯೊಂದು ಮನೆಗೆ ಅಕ್ಷರ ಜೋತಿ ತೆಗೆದುಕೊಂಡು ಹೋಗಿದ್ದರೆ, ಬಡವರ ಉದ್ದಾರಕ್ಕೆ ಇದ್ದ ಹಲವಾರು ಸರ್ಕಾರದ ಯೋಜನೆಗಳು ಉಪಯೋಗಕ್ಕೆ ಬರುತ್ತಿದ್ದವು ಎಂದರು.
ಶ್ರೀವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಗುಂಡಿ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಗದಗ ಅಬಕಾರಿ ಇಲಾಖೆ ಉಪ ಆಯುಕ್ತೆ ಲಕ್ಷೀ ನಾಯಕ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜಂಬಯ್ಯ ನಾಯಕ, ಡಿವೈಎಸ್‌ಪಿ ಡಾ.ಟಿ.ಮಂಜುನಾಥ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ್ ಶ್ರೀನಾಥ ಇತರರಿದ್ದರು.