ಸರ್ಕಾರದ ವಾಲ್ಮೀಕಿ ಜಯಂತಿಗೆ ಬಹಿಷ್ಕಾರ

Oplus_131072
Oplus_131072
Published on

ಹೊಸಪೇಟೆ: ಎಸ್ಟಿಗೆ ಕುರುಬ ಸಮುದಾಯ ಸೇರಿಸುವದನ್ನು ವಿರೋಧಿಸಿ ಸರ್ಕಾರದಿಂದ ಅ.07 ರಂದು ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ವಾಲ್ಮೀಕಿ ನಾಯಕ ಸಮಾಜ ಬಹಿಷ್ಕಾರ ಮಾಡಲು ತಿರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಗೋಸಲ ಭರಮಪ್ಪ ತಿಳಿಸಿದರು.

ಹೊಸಪೇಟೆಯ ಪತ್ರಿಕಾಭವದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕ ಸಮಾಜದ ಮನವಿಗೆ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದ ಗಡವು ಮುಗಿದಿದೆ. ಆದರು, ಯಾವುದೆ ಪಕ್ಷದ ನಾಯಕರು ಈ ಬಗ್ಗೆ ಧ್ವನಿಎತ್ತದಿರುವ ಹಿನ್ನೆಲೆಯಲ್ಲಿ ನಾವು ಈ ತಿರ್ಮಾನ ಕೈಗೊಂಡಿದ್ದೇವೆ. ಈ ಕುರಿತು ಸಮಾಜ ಸ್ವಾಮೀಜಿ ಸೇರಿದಂತೆ ಯಾರು ಕೂಡ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿದರು.

ನಮ್ಮ ಈ ಹೋರಾಟ ನಮ್ಮ ಸಮಾಜದ ಶಾಸಕರು, ಸಂಸದರು ಜನ ಪ್ರತಿನಿಧಿಗಳು ಧ್ವನಿ ಎತ್ತದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಯಾವುದೆ ಕಾರಣಕ್ಕೂ ಸರ್ಕಾರ ನಾಯಕ ಸಮಾಜದಲ್ಲಿ ಪ್ರಭಲ ಕುರುಬ ಸಮಾಜವನ್ನು ಸೇರಿಸುವುದನ್ನು ನಾವು ಒಪ್ಪುವುದಿಲ್ಲ. ಅ.07ರ ನಂತರ ನಮ್ಮ ಹೋರಾಟದ ರೂಪರೇಷೆಗಳನ್ನು ಸಿದ್ದಪಡಿಸುವುದಾಗಿ ತಿಳಿಸಿದರು.

ಪ್ರಮುಖರಾದ ದೇವರಮನೆ ಶ್ರೀನಿವಾಸ, ಕಿನ್ನಾಳ ಹನುಮಂತ, ಬೆಳಗೋಡ ಅಂಬಣ್ಣ, ಗುಡುಗುಡಿ ಸೋಮನಾಥ, ಗುಜ್ಜಲ್ ಚಂದ್ರಶೇಖರ, ದೇವೇಂದ್ರಪ್ಪ, ಕರಿ ಹನುಮಂತ, ಶ್ರೀಕಂಠ, ವಸಂತ, ಬೆಳಗೋಡ ಅಂಬಣ್ಣ, ಗುಡಿಗುಂಟಿ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net